ಕೋಡಿಜಾಲ್: ರಿಫಾಯಿ ಜುಮಾ ಮಸೀದಿ, ಹಯಾತುಲ್ ಇಸ್ಲಾಂ ಮದರಸದಲ್ಲಿ ಸಮಸ್ತ ಸ್ಥಾಪಕ ದಿನಾಚರಣೆ
ಕೊಣಾಜೆ ಜೂ.26: ಕೋಡಿಜಾಲ್ ಹಯಾತುಲ್ ಇಸ್ಲಾಂ ಮದರಸದಲ್ಲಿ ಸಮಸ್ತ ನೂರನೇ ವಾರ್ಷಿಕ ಸ್ಥಾಪಕ ದಿನಾಚರಣೆಯನ್ನು ಮಸೀದಿಯ ಖತೀಬರಾದ ಉವೈಸ್ ಮದನಿ ಅಲ್ ಅಝ್ಹರಿ ದುಆ ನೆರವೇರಿಸುವ ಮೂಲಕ ಉದ್ಘಾಟಿಸಿದರು. ಧ್ವಜಾರೋಹಣವನ್ನು ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೋಡಿಜಾಲ್ ನೆರವೇರಿಸಿದರು.
ಮದರಸ ವಿದ್ಯಾರ್ಥಿ ಆಯಿಝ್ ಕಿರಾಅತ್ ಪಠಿಸಿದರು, ಮದರಸ ಮುಖ್ಯ ಅಧ್ಯಾಪಕರಾದ ಝಾಕಿರ್ ಅನ್ಸಾರಿ ಪ್ರಾಸ್ತಾವಿಕ ಭಾಷಣ ಮಾಡಿ ಸಮಸ್ತದ ಮದ್ರಸದ ನಿರ್ವಹಣೆಯ ಬಗ್ಗೆ ತಿಳಿಸಿದರು. ಮಸೀದಿಯ ಖತೀಬರಾದ ಉವೈಸ್ ಮದನಿ ಅಲ್ ಅಝ್ಹರಿ ಮಾತನಾಡಿ ಸಮಸ್ತದ ಸಾಮಾಜಿಕ ಕಾರ್ಯಕ್ರಮಗಳು , ಸಮಸ್ತದ ಇತಿಹಾಸ ಮತ್ತು ಅಗಲಿದ ಸಮಸ್ತ ನೇತಾರರನ್ನು ಸ್ಮರಿಸಿದರು.
ಸಭೆಯಲ್ಲಿ ಜಮಾಅತ್ ಕಾರ್ಯದರ್ಶಿ ಮಸೂದ್ ಗುಂಡ್ಯ, ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷ ಅಮೀರ್ ಕೋಡಿಜಾಲ್, ಗೌರವಾಧ್ಯಕ್ಷರಾದ ಎ ಕೆ ಅಬ್ದುಲ್ ರಹಿಮಾನ್ , ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಕೆ ಎಸ್ ಎ ಘಟಕದ ಮಾಜಿ ಅಧ್ಯಕ್ಷ ಸೂಫಿ ಇಬ್ರಾಹಿಂ, ಉಪಾಧ್ಯಕ್ಷ ಖಾದರ್ ಕೆ ಎಂ ಕೆ, ಕೋಶಾಧಿಕಾರಿ ಮುಹಮ್ಮದ್ ಅಶ್ರಫ್, ಮಸೀದಿ ಆಡಳಿತ ಸಮಿತಿಯ ಇಸ್ಮಾಯಿಲ್ ಕೆ.ಎಂ, ಮಸೂದ್ ಕಂಗುಹಿತ್ಲು, ಮಸೀದಿ ಮುಅಝ್ಝಿನ್ ಮಜೀದ್ ಫೈಝಿ, ಇಬ್ರಾಹಿಂ ಮುಸ್ಲಿಯಾರ್, ಮದರಸ ಆಡಳಿತ ಸಮಿತಿಯ ಹಸೈನಾರ್, ಹಾಜಿ ಹಸನ್ ಕುಂಞಿ ಕೆಎಂ, ಮದರಸ ವಿದ್ಯಾರ್ಥಿಗಳು ಹಾಗೂ ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಪದಾಧಿಕಾರಿಗಳಾದ ಲತೀಫ್ ಕೆಎಂ, ಸಿದ್ದೀಕ್ ಡಿಎಂ, ನೌಶಾದ್, ಕಬೀರ್ ಕಂಗುಹಿತ್ಲು, ಅಶ್ರಫ್ ಗುಂಡ್ಯ, ನಾಸಿರ್ ಕೆಎಂ, ಅಝೀಝ್ ಗುಂಡ್ಯ, ಮೂಸ ಇಬ್ರಾಹಿಂ, ಶರೀಫ್ ಪರಂಡೆ, ಜಮಾತಿನ ಸದಸ್ಯರಾದ ಉಸ್ಮಾನ್ ಮುಂಬೈ, ಉಮರ್ ಕೆಎಂ, ಇಬ್ರಾಹಿಂ ಕೆಎಕೆ, ಶೇಕಬ್ಬ ಮತ್ತಿತರರು ಉಪಸ್ಥಿತರಿದ್ದರು.
ಮರಣ ಹೊಂದಿದವರಿಗೆ ವಿಶೇಷ ದುವಾ ನೆರವೇರಿಸಲಾಯಿತು. ಮದರಸ ಆಡಳಿತ ಸಮಿತಿಯ ಇಬ್ರಾಹಿಂ ಕೆ.ಎಂ ಸ್ವಾಗತಿಸಿದರು, ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶರೀಫ್ ವಂದಿಸಿದರು.
ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.