×
Ad

ಕೃಷ್ಣಾಪುರ | ಅಲ್-ಮದ್ರಸತುಲ್ ಅಝೀಝಿಯಾದ SKSBV ಪದಾಧಿಕಾರಿಗಳ ಆಯ್ಕೆ

Update: 2025-05-22 18:41 IST

ಮಂಗಳೂರು: ಕೃಷ್ಣಾಪುರದ 8 ಎ ಬ್ಲಾಕ್ ನ ಅಲ್-ಮದ್ರಸತುಲ್ ಅಝೀಝಿಯಾ(6902)ದ SKSBV 2025-26ನೇ ಶೈಕ್ಷಣಿಕ ವರ್ಷದ ನೂತನ ಸಮಿತಿಯ ಪದಾಧಿಕಾರಿಗಳನ್ನು ಮತದಾನದ ಮೂಲಕ ಗುರುವಾರ ಆಯ್ಕೆ ಮಾಡಲಾಯಿತು.

ಮಸೀದಿ ಆಡಳಿತ ಸಮಿತಿ ಹಾಗೂ ಮ್ಯಾನೇಜ್ಮೆಂಟ್ ಪದಾಧಿಕಾರಿಗಳು, ಪೋಷಕರ ಸಮ್ಮಖದಲ್ಲಿ ಮತನಾನ ನಡೆಯಿತು. ವಿದ್ಯಾರ್ಥಿಗಳು ಮತದಾನದಲ್ಲಿ ಸಕ್ರೀಯರಾಗಿ ಪಾಲ್ಗೊಂಡರು.

200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮತವನ್ನು ಚಲಾಯಿಸಿದರು. ಒಬ್ಬರಿಗೆ ಮೂರು ಮತ ಚಲಾಯಿಸುವ ಅವಕಾಶವಿತ್ತು. 101 ಮತ ಪಡೆದ ಮುಹಮ್ಮದ್ ಆಶಿಕ್ ಅಧ್ಯಕ್ಷರಾಗಿ ಆಯ್ಕೆಯಾದರು. 97 ಮತ ಪಡೆದ ಮುಹಮ್ಮದ್ ಅರ್ಶಿನ್ ಕಾರ್ಯದರ್ಶಿಯಾಗಿ ನೇಮಕಗೊಂಡರು. 103 ಮತ ಪಡೆದ ಮುಹಮ್ಮದ್ ಅರ್ಶಿದ್ ಖಜಾಂಜಿಯಾಗಿ ಆಯ್ಕೆಯಾದರು.

2025 26ನೇ ಶೈಕ್ಷಣಿಕ ವರ್ಷದ ಅಧ್ಯಯನ ಸಮಯದ ನಾಯಕಿ ಮತ್ತು ಉಪ ನಾಯಕಿಯರನ್ನೂ ಮತದಾನದ ಮೂಲಕ ಆಯ್ಕೆ ಮಾಡಲಾಯಿತು.

ಬೆಳಗ್ಗಿನ ಅಧ್ಯಯನ ಸಮಯದ ನಾಯಕಿಯಾಗಿ 141 ಮತಗಳೊಂದಿಗೆ ಮಾಝಿನಾ ಆಯ್ಕೆಯಾದರು. 29 ಮತಗಳೊಂದಿಗೆ ಶುಝ ಉಪನಾಯಕಿಯಾಗಿ ಆಯ್ಕೆಯಾದರು.

ಸಂಜೆಯ ಅಧ್ಯಯನ ಸಮಯದ ನಾಯಕಿಯಾಗಿ 98 ಮತಗಳೊಂದಿಗೆ ಶುಹೈಬ, 38 ಮತಗಳೊಂದಿಗೆ ಉಪನಾಯಕಿಯಾಗಿ ಶಾಹಿನ ಆಯ್ಕೆಯಾದರು. ರಾತ್ರಿಯ ಅಧ್ಯಯನ ಸಮಯದ ನಾಯಕಿಯಾಗಿ 79 ಮತಗಳೊಂದಿಗೆ ಅಫ್ರೀನ, 38 ಮತಗಳೊಂದಿಗೆ ಉಪನಾಯಕಿಯಾಗಿ ಆಫ್ನಾನ್ ಆಯ್ಕೆಯಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News