×
Ad

ಮಂಗಳೂರು | 2024ರ ಲೋಕಸಭೆ ಚುನಾವಣೆ: ಆ.8ರಿಂದ 20ರವರೆಗೆ ಮತ ಯಂತ್ರಗಳ ಪರಿಶೀಲನೆ

Update: 2023-08-05 14:04 IST

ಸಾಂದರ್ಭಿಕ ಚಿತ್ರ (Source: PTI)

ಮಂಗಳೂರು, ಆ.5: ಮುಂದಿನ ವರ್ಷ (2024ರಲ್ಲಿ) ನಡೆಯಲಿರುವ ಲೋಕಸಭೆ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಆ.8ರಿಂದ 20ರವರೆಗೆ ವಿದ್ಯುನ್ಮಾನ ಮತ ಯಂತ್ರಗಳ ಪ್ರಥಮ ಹಂತದ ಪರಿಶೀಲನೆ ಮಂಗಳೂರು ನಗರ ಹೊರ ವಲಯದ ಪಡೀಲ್ ನಲ್ಲಿರುವ ದ.ಕ. ಜಿಲ್ಲಾಧಿಕಾರಿಯ ನೂತನ ಕಚೇರಿ ಸಂಕೀರ್ಣದಲ್ಲಿರುವ ಭದ್ರತಾ ಕೊಠಡಿಯಲ್ಲಿ ನಡೆಯಲಿದೆ.

ಇದಕ್ಕಾಗಿ ಹೈದರಾಬಾದ್ ನ ECILನ 18 ಮಂದಿ ಇಂಜಿನಿಯರ್ ಗಳನ್ನು ನಿಯೋಜಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಅಪರ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News