ಜೂ.27: ಮುಹರ್ರಂ ತಿಂಗಳು ಪ್ರಾರಂಭ
Update: 2025-06-27 14:13 IST
ಮಂಗಳೂರು: ಜೂ.26 ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಮುಹರ್ರಂ ತಿಂಗಳ ಪ್ರಥಮ ಚಂದ್ರ ದರ್ಶನವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ರವರು ತೀರ್ಮಾನಿಸಿರುತ್ತಾರೆ.
ಇಂದು ಜೂ.27 ಶುಕ್ರವಾರ ಮುಹರ್ರಂ 1 ಆಗಿದ್ದು, ಜುಲೈ5 ಶನಿವಾರ ಮುಹರ್ರಂ 09 ತಾಸೂಆ ಹಾಗೂ ಜುಲೈ.6 ಆದಿತ್ಯವಾರ ಮುಹರ್ರಂ 10 ಆಶೂರಾಅ್ ದಿನವಾಗಿರುತ್ತದೆ. ಆ ದಿನ ಉಪವಾಸ ಸುನ್ನತ್ ಆಗಿದೆ ಎಂದು ಎಂದು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಮತ್ತು ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.