×
Ad

ಮಂಗಳೂರು: ಮೋದಿ ಬ್ರಿಗೇಡ್‌ನ ಉದ್ಘಾಟನೆ

Update: 2024-01-21 18:07 IST

ಮಂಗಳೂರು: ಬಲಿಷ್ಠ ಭಾರತ ನಿರ್ಮಾಣಕ್ಕೆ ಸಮರ್ಥ ನಾಯಕನನ್ನು ಆಯ್ಕೆ ಮಾಡುವುದು ಎಲ್ಲರ ಕರ್ತವ್ಯವವಾಗಿದೆ. ರಾಜಕೀಯ ವಲಯದಲ್ಲಿ ಸತತವಾಗಿ ಆಡಳಿತದಲ್ಲಿ ಇದ್ದವರ ವಿರುದ್ಧ ಆಡಳಿತ ವಿರೋಧಿ ಅಲೆ ಇರುವುದು ಸಹಜ. ಆದರೆ ಪ್ರಧಾನಿ ಮೋದಿ ಅದಕ್ಕೆ ವ್ಯತಿರಿಕ್ತವಾಗಿದ್ದಾರೆ. ಅವರಿಗೆ ಈಗಲೂ ಬೆಂಬಲ ವ್ಯಕ್ತವಾಗುತ್ತಿದೆ ಎಂದು ನ್ಯಾಯವಾದಿ ಮೀರಾ ರಾಘವೇಂದ್ರ ಹೇಳಿದರು.

ನಗರದ ಟಿ.ವಿ. ರಮಣ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ರವಿವಾರ ನಡೆದ ‘ಮೋದಿ ಬ್ರಿಗೇಡ್’ನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಜೆಪಿ ದ.ಕ.ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಮುಖಂಡರಾದ ಹರಿಕಷ್ಣ ಬಂಟ್ವಾಳ, ಕಸ್ತೂರಿ ಪಂಜಾ, ಪೂಜಾ ಪೈ, ಮಂಗಳೂರು ಉಪ ಮೇಯರ್ ಸುನಿತಾ, ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್, ವಿಶ್ವ ಹಿಂದೂ ಪರಿಷದ್‌ನ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ನಿರ್ದೇಶಕ ವಿಜಯ್ ಕುಮಾರ್ ಕೋಡಿಯಲ್‌ಬೈಲು, ನವೀನ್ ಡಿ. ಪಡೀಲ್, ಮೋದಿ ಬ್ರಿಗೇಡ್‌ನ ಗೌರವಾಧ್ಯಕ್ಷ ದಿನೇಶ್ ಕೆ. ಉರ್ವ, ಅಧ್ಯಕ್ಷ ಪದ್ಮರಾಜ್ ಲೋಹಿತ್‌ನಗರ ಉಪಸ್ಥಿತರಿದ್ದರು. ಮೋದಿ ಬ್ರಿಗೇಡ್‌ನ ಪ್ರಧಾನ ಕಾರ್ಯದರ್ಶಿ ರವಿ ಕಾವೂರು ಪ್ರಾಸ್ತವಿಕವಾಗಿ ಮಾತನಾಡಿದರು. ಶಿವಪ್ರಸಾದ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News