×
Ad

ಮಂಗಳೂರು: ಎಂಸಿಸಿ ಬ್ಯಾಂಕಿನಲ್ಲಿ ಸಂಸ್ಥಾಪಕರ ದಿನಾಚರಣೆ

Update: 2025-05-11 18:52 IST

ಮಂಗಳೂರು: ಎಂಸಿಸಿ ಬ್ಯಾಂಕಿನ 113ನೇ ಸಂಸ್ಥಾಪಕರ ದಿನಾಚರಣೆ ಶನಿವಾರ ಎಂಸಿಸಿ ಬ್ಯಾಂಕಿನ ಆಡಳಿತ ಕಚೇರಿಯ ಅವರಣದಲ್ಲಿ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಉಡುಪಿ ಧರ್ಮಪ್ರಾಂತ್ಯದ ಪಿಆರ್‌ಒ ವಂ.ಫಾ. ಡೆನಿಸ್ ಡೆಸಾ ಅವರು ಮಾತನಾಡಿ ಸಂಸ್ಥೆಯು ಪರಂಪರೆ ಮತ್ತು ಅಡಿಪಾಯದ ಮೌಲ್ಯಗಳನ್ನು ಮುಂದುವರಿಸುವುದು , ಅತ್ಮಾವಲೋಕನ , ದೇವರಲ್ಲಿ ನಂಬಿಕೆ, ಬ್ಯಾಂಕಿನ ಸಿಬ್ಬಂದಿ ಶ್ರದ್ದೆಯಿಂದ ಮತ್ತು ಗ್ರಾಹಕರೊಂದಿಗೆ ಉತ್ತಮವಾಗಿ ವ್ಯವಹರಿಸಿದಾಗ ಸಂಸ್ಥೆಯ ಪ್ರಗತಿ ಸಾಧ್ಯ ಎಂದರು.

 

ಪಾನೀರ್‌ನ ದಿ ಮರ್ಸಿಡ್ ಅನಾಥಾಶ್ರಮ ಮತ್ತು ಕಂಕನಾಡಿಯ ಶಾಲೋಮ್ ಟ್ರಸ್ಟ್‌ಗೆ ಈ ಸಂದರ್ಭದಲ್ಲಿ ದೇಣಿಗೆಯನ್ನು ವಿತರಿಸಲಾಯಿತು. ಹೊಸದಾಗಿ ಸಿಎ ಪರೀಕ್ಷೇಯಲ್ಲಿ ಉತ್ತೀರ್ಣರಾದ ಗ್ರಾಹಕರ ಮಕ್ಕಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

 

ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ಸಂಸ್ಥಾಪಕ ಪಿ.ಎಫ್. ಎಕ್ಸ್ ಸಲ್ಡಾನ್ಹಾ ಕುಟುಂಬದ ಸದಸ್ಯರು ಮತ್ತು ವೇದಿಕೆಯಲ್ಲಿರುವ ಗಣ್ಯರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

 

ವಂ.ಸಿ. ಕ್ಲಾರಾ ಮಿನೇಜಸ್ ಬ್ಯಾಂಕಿನ ಪ್ರಗತಿಯನ್ನು ತೋರಿಸುವ ಬುಲೆಟಿನ್ ಅನ್ನು ಬಿಡುಗಡೆ ಮಾಡಿ ಬ್ಯಾಂಕಿನ ಪ್ರಗತಿಯನ್ನು ಶ್ಲಾಘಿಸಿದರು.

ಎಂಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಡಾ. ಎಡ್ಮಂಡ್ ಜೆ.ಬಿ. ಫ್ರಾಂಕ್ , ಎಂಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ಮಾರ್ಸೆಲ್ ಎಂ.ಡಿ ಸೋಜ, ಮಂಂಗಳೂರು ಕೊಂಕಣ್ಸ್ ದುಬೈನ ಹೊಸದಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಸ್ಟೀಫನ್ ಮಿನೇಜಸ್ ಮತ್ತು ಕಳೆದ 50 ವರ್ಷಗಳಿಂದ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಪ್ರಜ್ಞ ಕೌನ್ಸೆಲಿಂಗ್ ಸೆಂಟರ್‌ನ ನಿರ್ದೇಶಕಿ ಪ್ರೊ. ಹಿಲ್ಡಾ ರಾಯಪ್ಪನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಿಎ ಲಯ್ನಾಲ್ ನೋರೊನ್ಹಾ ಅವರು ಬ್ಯಾಂಕಿನ ಇತಿಹಾಸ, ಪ್ರಗತಿಯನ್ನು ವಿವರಿಸಿದರು.

 

 

ಬ್ಯಾಂಕಿನ ನಿರ್ದೇಶಕರಾದ ಅನಿಲ್ ಪತ್ರಾವೊ, ಆಂಡ್ರ್ಯು ಡಿ ಸೋಜ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜ, ಡಾ. ಜೆರಾಲ್ಡ್ ಪಿಂಟೊ, ಮೆಲ್ವಿನ್ ವಾಸ್, ಸಿ.ಜಿ.ಪಿಂಟೊ, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜ, ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರುಜ್ ಮತ್ತು ಆಲ್ವಿನ್ ಪಿ. ಮೊಂತೇರೊ ಉಪಸ್ಥಿತರಿದ್ದರು.

ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ವಂದಿಸಿ, ಗ್ರೀಶ್ಮಾ ಸಲ್ಡಾನ್ಹಾ ನೀರ್‌ಮಾರ್ಗ ಕಾರ್ಯಕ್ರಮ ನಿರೂಪಿಸಿದರು.

 

 

 

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News