ಉಳ್ಳಾಲ: ಮಾರುತಿ ಮಾಣಿಕ್ಯ ಸಮಾರೋಪ ಕಾರ್ಯಕ್ರಮ
ಮಂಗಳೂರು: ಉಳ್ಳಾಲ ಮೊಗವೀರಪಟ್ಣ ಮಾರುತಿ ಜನಸೇವಾ ಸಂಘ, ಮಾರುತಿ ಯುವಕ ಮಂಡಲದ 40ನೇ ವರ್ಷದ ಆಚರಣೆಯ ಒಂದು ವರ್ಷದ ಸಮಾಜಮುಖಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ಪುರಭವನದಲ್ಲಿ ಗುರುವಾರ ಮಾರುತಿ ಮಾಣಿಕ್ಯ ಸಮಾರೋಪ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮೊಗವೀರರು ಸಮುದ್ರವನ್ನು ನಂಬಿಕೊಂಡ ಸಾಹಸಿಗರು. ಧಾರ್ಮಿಕ ಕಾರ್ಯಗಳನ್ನು ಹಾಗೂ ಸೌಹಾರ್ದಮಯ ವಾತಾವರಣ ನಿರ್ಮಿಸುವ ನೆಲೆಯಲ್ಲಿ ಮೊಗವೀರರ ಪಾತ್ರ ಅಪಾರವಾಗಿದೆ. ಅದರಲ್ಲೂ ಮಾರುತಿ ಜನಸೇವಾ ಸಂಘ, ಮಾರುತಿ ಯುವಕ ಮಂಡಲ ಸಮಾಜದ ಶ್ರೇಯಸ್ಸಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ಯಶ್‌ಪಾಲ್ ವಿ. ಸುವರ್ಣ ಮಾತನಾಡಿ, ಶಾಸಕ ವೇದವ್ಯಾಸ ಕಾಮತ್ ಶುಭ ಹಾರೈಸಿದರು. ರಾಜ್ಯ ಅಲೈಡ್ ಹೆಲ್ತ್ ಕೌನ್ಸಿಲ್ ಚೇರ್‌ಮನ್ ಡಾ. ಯು.ಟಿ. ಇಫ್ತಿಕಾರ್, ಮೆಟಲ್ ಗ್ರೂಫ್ ಆಫ್ ಕಂಪೆನೀಸ್ ಬಹರೈನ್ ಚೇರ್‌ಮನ್ ಅಬ್ದುಲ್ ರಝಾಕ್, ಮೊಗವೀರ ಬಹರೈನ್ ಅಧ್ಯಕ್ಷ ಶಿಲ್ಪಾಶಮಿತ್ ಕುಂದರ್, ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಉಪಾಧ್ಯಕ್ಷ ಮೋಹನ್ ಬೆಂಗ್ರೆ, ಉದ್ಯಮಿಗಳಾದ ಎಚ್.ಎಸ್. ನಿಸಾರ್, ಸಿಂಧೂರಾಮ್ ಎ. ಪುತ್ರನ್, ಉಡುಪಿಯ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಜಯಂತ್ ಅಮೀನ್, ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತರಾಷ್ಟ್ರೀಯ ಕ್ರೀಡಾಪಟು ಸಹನಾ ಕುಮಾರಿ, ಟೆನಿಸ್ ಬಾಲ್ ಕ್ರಿಕೆಟ್ ಅಕಾಡಮಿಯ ಪ್ರಮುಖರಾದ ಗೌತಮ್ ಶೆಟ್ಟಿ, ಶರತ್ ಶೆಟ್ಟಿ ಪಡುಬಿದ್ರಿ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿದ್ದರು.
*ವಿವಿಧ ಕ್ಷೇತ್ರದ ಸಾಧಕರಾದ ಧನಲಕ್ಷ್ಮಿ ಪೂಜಾರಿ, ರವಿಶಂಕರ್ ವಳಕುಂಜ, ದೀಪಾಶ್ರೀ ಎಸ್., ರೆಮೋನಾ ಇವೆಟ್ ಪಿರೇರಾ, ಪ್ರಮೀಳಾ ದೀಪಕ್ ಪೆರ್ಮುದೆ, ಶಮ್ಮಿ ಗಫೂರ್ ಪಡುಬಿದ್ರಿ, ವಿದ್ಯಾ ಸಂಪತ್ ಕರ್ಕೇರ ಅವರಿಗೆ ಮಾರುತಿ ಮಾಣಿಕ್ಯ ಸಾಧಕ ಪ್ರಶಸ್ತಿ ಪ್ರದಾನಿಸಲಾಯಿತು. ಪ್ರಮುಖರಾದ ಅಬ್ದುಲ್ ರಝಾಕ್ ಹೆಜಮಾಡಿ, ಪ್ರಶಾಂತ್ ಅಂಬಲಪಾಡಿ, ಚೇತನ್ ಬೆಂಗ್ರೆ, ಜಾನಕಿ ಪುತ್ರನ್, ವಿದ್ಯಾ ಸಂಪತ್ ಕರ್ಕೇರ, ನಾಗೇಶ್ ರಾವ್ ಅವರನ್ನು ಅಭಿನಂದಿಸಲಾಯಿತು.
*ಕಾರ್ಯಕ್ರಮದಲ್ಲಿ 250 ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ವೆಚ್ಚದಲ್ಲಿ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಆರ್ಥಿಕವಾಗಿ ಹಿಂದುಳಿದ ಮಂಕಿಸ್ಟಾಂಡ್ ಬಳಿಯ ಮಾರುತಿ ಆಸರೆ ಮನೆ ಹಾಗೂ ಉಳ್ಳಾಲ ಉಳಿಯದ ಮಾರುತಿ ಆಶ್ರಯದ ಕರಾರು ಪತ್ರ ಹಸ್ತಾಂತರ, 16 ಪಟ್ನ ಸಂಯುಕ್ತ ಸಭಾದ ಗುರಿಕಾರರಿಗೆ ಸನ್ಮಾನ, ಗೌರವ ಸಮರ್ಪಣೆ ನೆರವೇರಿತು.
ಮಾರುತಿ ಜನಸೇವಾ ಸಂಘ ಮತ್ತು ಮಾರುತಿ ಯುವಕ ಮಂಡಲದ ಗೌರವಾಧ್ಯಕ್ಷ ವರದರಾಜ್ ಬಂಗೇರ, ಅಧ್ಯಕ್ಷ ಸಂದೀಪ್ ಪುತ್ರನ್, ಪ್ರಧಾನ ಸಂಚಾಲಕ ಸುಧೀರ್ ವಿ.ಅಮೀನ್, ಪ್ರಧಾನ ಕಾರ್ಯದರ್ಶಿ ಕಪಿಲ್ ಎಸ್. ಬಂಗೇರ, ಉಪಾಧ್ಯಕ್ಷ ಪ್ರಶಾಂತ್ ಬಿ. ಉಳ್ಳಾಲ್, ಕಿರಣ್ ಪುತ್ರನ್, ಕೋಶಾಧಿಕಾರಿ ಅನಿಲ್‌ಚರಣ್, ಕಾರ್ಯದರ್ಶಿ ಪವನ್ ಉಳ್ಳಾಲ್, ಕ್ರೀಡಾ ಕಾರ್ಯದರ್ಶಿ ಮಹೇಶ್ ಸಾಲ್ಯಾನ್, ಜತೆ ಕಾರ್ಯದರ್ಶಿ ಪುನೀತ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.
ಆರ್‌ಜೆ ಪ್ರಸನ್ನ, ಮಧುರಾಜ್, ಶರ್ಮಿಳಾ ಕಾರ್ಯಕ್ರಮ ನಿರೂಪಿಸಿದರು.