×
Ad

ಬೋಳಿಯಾರ್: ಶಾಲೆಯ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಡಿವೈಎಫ್ಐ ಮನವಿ

Update: 2025-08-02 16:00 IST

ಕೊಣಾಜೆ: ಬೋಳಿಯಾರ್ ಗ್ರಾಪಂ ವ್ಯಾಪ್ತಿಯ ಜಾರದಗುಡ್ಡೆ ಪ್ರದೇಶದಲ್ಲಿರುವ ದ.ಕ. ಜಿಪಂ ಪ್ರಾಥಮಿಕ ಶಾಲೆಯ ಗೋಡೆ, ಆವರಣ ಗೋಡೆ ಬಿರುಕು ಬಿಟ್ಟಿದೆ. ಶಾಲೆಯ ಪಕ್ಕದಲ್ಲೇ ಕಾರ್ಯಾಚರಿಸುತ್ತಿರುವ ಅಂಗನವಾಡಿ ಕಟ್ಟಡದ ಗೋಡೆ ಕೂಡ ಬಿರುಕು ಬಿಟ್ಟಿದ್ದು ಕುಸಿಯುವ ಭೀತಿಯಲ್ಲಿದೆ. ಆದ್ದರಿಂದ ಶಾಲೆಯ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಬೋಳಿಯಾರ್ ನ ಡಿವೈಎಫ್ ಐ ಘಟಕವು ಬೋಳಿಯಾರ್ ಗ್ರಾಮ ಪಂಚಾಯತ್ ಗೆ ತೆರಳಿ ಮನವಿ ಸಲ್ಲಿಸಿತು.

ನಿಯೋಗದಲ್ಲಿ ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ, ಉಪಾಧ್ಯಕ್ಷ ರಝಾಕ್ ಮುಡಿಪು, ಮುಖಂಡ ಇರ್ಫಾನ್ ಇರಾ, ಸಾಮಾಜಿಕ ಕಾರ್ಯಕರ್ತರಾದ ಶಮೀರ್, ಸ್ಥಳೀಯರಾದ ಫಯಾಝ್, ರಫೀಕ್, ಸಲಾಮ್ ಜಾರದಗುಡ್ಡೆ, ಬಾಪು ಅಮ್ಮೆಂಬಳ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News