×
Ad

ಸೆ.16: ಕಿನ್ಯದಲ್ಲಿ ಹುಬ್ಬುರ್ರಸೂಲ್ ಮೀಲಾದ್ ಸಮಾವೇಶ, ಜಾಥಾ

Update: 2023-09-16 19:02 IST

ಉಳ್ಳಾಲ, ಸೆ.16: ಕರ್ನಾಟಕ ಮುಸ್ಲಿಂ ಜಮಾಅತ್,ಎಸ್ ವೈಎಸ್ ಮತ್ತು ಎಸ್ಸೆಸ್ಸೆಫ್ ಕಿನ್ಯ ವತಿಯಿಂದ ಪ್ರವಾದಿ ಮುಹಮ್ಮದ್ (ಸ.ಅ) ಜನ್ಮ ತಿಂಗಳ ಪ್ರಯುಕ್ತ ರವಿವಾರ ಕಿನ್ಯದಲ್ಲಿ ಹುಬ್ಬುರ್ರಸೂಲ್ ಮೀಲಾದ್ ಸಮಾವೇಶ ನಡೆಯಲಿದೆ.

ಸಂಜೆ 4 ಗಂಟೆಗೆ ಸೈಯದ್ ಶಿಹಾಬುದ್ದೀನ್ ತಂಙಳ್ ಹುಮೈದಿ ಅಲ್ ಬುಖಾರಿ ಕಿನ್ಯ ನೇತೃತ್ವದಲ್ಲಿ ಹಝ್ರತ್ ಹುಸೈನ್ ವಲಿಯುಲ್ಲಾಹಿ ದರ್ಗಾ ಝಿಯಾರತ್ ನಂತರ ಮೀಲಾದ್ ಸಮಾವೇಶ ನಡೆಯಲಿರುವ ತಾಜುಲ್ ಫುಖಹಾಅ ವೇದಿಕೆ ತನಕ ಬೃಹತ್ ವಾಹನ ಜಾಥಾ ನಡೆಯಲಿದೆ.

ಸಂಜೆ 7ಕ್ಕೆ ಹುಬ್ಬುರ್ರಸೂಲ್ ಮೀಲಾದ್ ಸಮಾವೇಶ ಸೈಯದ್ ಅಲವಿ ತಂಙಳ್ ದುಆ ಮೂಲಕ ಚಾಲನೆಗೊಳ್ಳಲಿದೆ. ಕರ್ನಾಟಕ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಅಧ್ಯಕ್ಷ ಹಾಜಿ ಬಿ.ಎಂ. ಇಸ್ಮಾಈಲ್ ಪರಮಾಂಡ ಅಧ್ಯಕ್ಷತೆಯಲ್ಲಿ ಅಶ್ರಫ್ ಸಖಾಫಿ ಕಣ್ಣಂಗಾರ್ ಸಮಾರಂಭವನ್ನು ಉದ್ಘಾಟಿಸುವರು. ಪಾತೂರು ಅಬ್ದುಲ್ ಜಬ್ಬಾರ್ ಸಖಾಫಿ ಮುಖ್ಯ ಭಾಷಣ ಮಾಡಲಿರುವರು.

ಕರ್ನಾಟಕ ವಿಧಾನಸಭೆ ಸಭಾಪತಿ ಯು.ಟಿ ಖಾದರ್, ಕಿನ್ಯ ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷ ಕೆ.ಸಿ.ಇಸ್ಮಾಈಲ್ ಹಾಜಿ ಚಾಯರವಳಚ್ಚಿಲ್, ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ವೆಸ್ಟ್ ಜಿಲ್ಲೆ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮರಿಕ್ಕಳ ಮತ್ತಿತರ ನಾಯಕರು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಕನ್ವೀನರ್ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News