ದಾವಣಗೆರೆ | ಬಾಲನ್ಯಾಯ ಮಂಡಳಿಗೆ ಆಗಮಿಸಿದ್ದ ವೇಳೆ ಪತಿಯಿಂದ ಪತ್ನಿಯ ಹತ್ಯೆ
Update: 2025-09-23 23:18 IST
ಸಾಂದರ್ಭಿಕ ಚಿತ್ರ
ದಾವಣಗೆರೆ, ಸೆ.23: ಕೌಟುಂಬಿಕ ಸಮಸ್ಯೆ ಇತ್ಯರ್ಥಕ್ಕೆಂದು ಬಾಲನ್ಯಾಯ ಮಂಡಳಿಗೆ ಆಗಮಿಸಿದ್ದ ವೇಳೆ ಪತಿಯೇ ಪತ್ನಿಯನ್ನು ಹತ್ಯೆಗೈದ ಘಟನೆ ಮಂಗಳವಾರ ನಗರದಲ್ಲಿ ವರದಿಯಾಗಿದೆ.
ತಾಲೂಕಿನ ಕಾಡಜ್ಜಿ ಗ್ರಾಮದ ಮುಷ್ಕಾನ್ ಬಾನು (26) ಕೊಲೆಯಾದ ಪತ್ನಿ. ಪತಿ ಕಲೀಂವುಲ್ಲಾ (35) ಕೊಲೆ ಮಾಡಿದ ಆರೋಪಿ.
ಮಕ್ಕಳ ಪಾಲನೆಗೆ ಸಂಬಂಧಿಸಿದ ವಿಚಾರ ಬಗೆಹರಿಸಿಕೊಳ್ಳಲು ಪತ್ನಿ ಎಂಸಿಸಿ ಬಡಾವಣೆಯ ಬಾಲ ನ್ಯಾಯ ಮಂಡಳಿಗೆ ಬಂದಾಗ ಪತಿ ಆವರಣದಲ್ಲಿಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲದೇ, ಜಗಳ ಬಿಡಿಸಲು ಮುಂದಾದ ಬಾನು ಅವರ ತಾಯಿ ಪರ್ಝನ್ (50) ಕೂಡ ಚಾಕು ಇರಿತಕ್ಕೆ ಒಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.