×
Ad

ಮತ್ತೆ ಐದು ಕೋವಿಡ್ ಸಾವಿನೊಂದಿಗೆ 37ಕ್ಕೇರಿದ ಮೃತರ ಸಂಖ್ಯೆ

Update: 2025-06-04 07:43 IST

PC:freepik

ಹೊಸದಿಲ್ಲಿ: ಕೋವಿಡ್-19 ಸೋಂಕಿನಿಂದ ಮಂಗಳವಾರ ಮತ್ತೆ ಐದು ಮಂದಿ ಮೃತಪಟ್ಟಿದ್ದು, ದೇಶದಲ್ಲಿ ಪ್ರಸಕ್ತ ವರ್ಷ ಮೃತರ ಸಂಖ್ಯೆ 37ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಇಬ್ಬರು, ಕೇರಳ, ತಮಿಳುನಾಡು ಹಾಗೂ ಬಂಗಾಳದಲ್ಲಿ ತಲಾ ಒಬ್ಬರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್-19 ಸೋಂಕಿತರ ಸಂಖ್ಯೆ 4026ಕ್ಕೇರಿದ್ದು, ಕೇರಳದಲ್ಲಿ ಗರಿಷ್ಠ ಅಂದರೆ 1416 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ (494), ಗುಜರಾತ್ (397) ಮತ್ತು ದೆಹಲಿ (393) ನಂತರದ ಸ್ಥಾನಗಳಲ್ಲಿವೆ.

ದೇಶಾದ್ಯಂತ ಇದುವರೆಗೆ ಪ್ರಸಕ್ತ ವರ್ಷ 37 ಕೋವಿಡ್-19 ಸೋಂಕಿತರು ಮೃತಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಗರಿಷ್ಠ (10) ಸಂಖ್ಯೆಯ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಕೇರಳ (9), ದೆಹಲಿ (4), ಕರ್ನಾಟಕ (4), ತಮಿಳುನಾಡು (3), ಉತ್ತರ ಪ್ರದೇಶ (2) ನಂತರದ ಸ್ಥಾನಗಳಲ್ಲಿದ್ದು, ಗುಜರಾತ್, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ ಮತ್ತು ಬಂಗಾಳದಲ್ಲಿ ತಲಾ ಒಂದು ಸಾವು ವರದಿಯಾಗಿದೆ.

ಮಹಾರಾಷ್ಟ್ರದಲ್ಲಿ ಮಂಗಳವಾರ ಮೃತಪಟ್ಟ ಇಬ್ಬರೂ, 70 ವರ್ಷ ದಾಟಿದ ಮಹಿಳೆಯರಾಗಿದ್ದು, ಮಧುಮೇಹ ಸೇರಿದಂತೆ ಇತರ ಸಹ ಅಸ್ವಸ್ಥತೆಗಳನ್ನು ಹೊಂದಿದ್ದರು ಎಂದು ಸರ್ಕಾರ ಮಾಹಿತಿ ನೀಡಿದೆ. ಕೇರಳದಲ್ಲಿ ಮೃತಪಟ್ಟ ವ್ಯಕ್ತಿ 80 ವರ್ಷದ ವೃದ್ಧರಾಗಿದ್ದು, ತೀವ್ರ ನ್ಯುಮೋನಿಯಾ, ತೀವ್ರ ಉಸಿರಾಟದ ತೊಂದರೆ, ಮಧುಮೇಹ, ಹೈಪರ್ ಟೆನ್ಷನ್ ಮತ್ತು ಹೃದಯನಾಳ ಸಮಸ್ಯೆ ಇತ್ತು ಎನ್ನಲಾಗಿದೆ.

ತಮಿಳುನಾಡಿನಲ್ಲಿ ಮೃತಪಟ್ಟ 69 ವರ್ಷದ ಮಹಿಳೆ ಟೈಪ್-2 ಮಧುಮೇಹದಿಂದ ಮತ್ತು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು. ಬಂಗಾಳದಲ್ಲಿ ಮೃತಪಟ್ಟ 43 ವರ್ಷದ ಮಹಿಳೆ ಅಕ್ಯೂಟ್ ಕೊರೊನರಿ ಸಿಂಡ್ರೋಮ್, ಸೆಪ್ಟಿಕ್ ಶಾಕ್ ಮತ್ತು ತೀವ್ರತರ ಕಿಡ್ನಿ ಗಾಯದಂಥ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News