ಕೆಪಿಎ ಅಬ್ದುಲ್ ಖಾದರ್ ಹಾಜಿ
Update: 2026-08-03 21:06 IST
ಕೊಣಾಜೆ: ಕೊಣಾಜೆ ಗ್ರಾಮದ ಕುಂಟಾಲಗುರಿ ನಿವಾಸಿ ಕೆಪಿಎ ಅಬ್ದುಲ್ ಖಾದರ್ ಹಾಜಿ (ಚೆರೋನು ಹಾಜಿ) (83) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನ ಹೊಂದಿದರು.
ಒಂದು ಗಂಡು ಮೂರು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕುಂಟಾಲಗುಳಿ ಪ್ರದೇಶದಲ್ಲಿ ಕಳೆದ 60 ವರ್ಷಕ್ಕಿಂತಲೂ ಮಿಕ್ಕಿ ಅಂಗಡಿ ನಡೆಸುತ್ತಿದ್ದ ಇವರು ಉದ್ಯಮಿಯಾಗಿ ಗುರು ತಿಸಿಕೊಂಡಿದ್ದರು. ನಡುಪದವು ಮಸೀದಿಯ ಮಾಜಿ ಅಧ್ಯಕ್ಷರಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿ ಕೊಂಡಿದ್ದರು.ಇವರ ನಿಧನಕ್ಕೆ ಸಚಿವ ಯು.ಟಿ.ಖಾದರ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.