ಎಚ್.ಪಿ. ಅಬ್ದುಲ್ ರಹಿಮಾನ್ ಕೊಪ್ಪ
Update: 2026-08-01 17:36 IST
ಮಂಗಳೂರು: ಕೊಪ್ಪ ಮೂಲತ: ದ.ಕ. ಜಿಲ್ಲೆಯ ಹೊಸಂಗಡಿ ನಿವಾಸಿ ಎಚ್.ಪಿ. ಅಬ್ದುಲ್ ರಹಿಮಾನ್ (91) ರವರು ಶುಕ್ರವಾರ ತನ್ನ ಸ್ವಗೃಹ ಕೊಪ್ಪದಲ್ಲಿ ನಿಧನ ಹೊಂದಿದರು.
ಇವರು ಹಲವು ದಶಕಗಳಿಂದ ಕೊಪ್ಪದಲ್ಲಿ ಜಿನಸು ವ್ಯಾಪಾರಿಯಾಗಿದ್ದರು.
ಇವರು ಪತ್ನಿ, ಓರ್ವ ಪುತ್ರ, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.