ಅಪ್ಪಿ ಶೆಟ್ಟಿಗಾರ್
Update: 2026-07-10 21:42 IST
ಉಡುಪಿ, ಜು.10: ಪರ್ಕಳದ ಅಪ್ಪಿ ಶೆಟ್ಟಿಗಾರ್ (86) ಇವರು ವಯೋಸಹಜ ಕಾಯಿಲೆಯಿಂದ ಕೊಳಲಗಿರಿಯಲ್ಲಿರುವ ಮಾಹೆ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್‌ನಲ್ಲಿ ಇಂದು ನಿಧನ ಹೊಂದಿದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಯಲ್ಲಿ 35 ವರ್ಷಗಳ ಕಾಲ ಇವರು ಸೇವೆ ಸಲ್ಲಿಸಿದ್ದರು.
ಅಂದಿನ ದಿನಗಳಲ್ಲಿ ನೇಕಾರಿಕೆ, ಅವಲಕ್ಕಿ ಕುಟ್ಟುವಿಕೆ, ಕೃಷಿ ಕಾರ್ಯ ಮುಂತಾದವುಗಳಲ್ಲಿ ತೊಡಗಿಸಿಕೊಂಡಿದ್ದ ಅಪ್ಪಿ ಶೆಟ್ಟಿಗಾರ್ ಪರೋಪಕಾರಿ ಪ್ರವೃತ್ತಿಯೊಂದಿಗೆ ಜನಾನುರಾಗಿಯಾಗಿದ್ದರು. ಅವರಿಚ್ಛೆಯಂತೆ ಅವರ ದೇಹವನ್ನು ಕೆ.ಎಂ.ಸಿ. ಮಣಿಪಾಲದ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ದಾನ ಮಾಡಲಾಯಿತು. ಅಪ್ಪಿ ಶೆಟ್ಟಿಗಾರ್ ಅವರು ಓರ್ವ ಪುತ್ರಿ, ನಾಲ್ವರು ಪುತ್ರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.