ಖದೀಜಾ ಕಲ್ಲಾಡಿ
Update: 2026-07-10 21:32 IST
ಮಂಗಳೂರು, ಜು.10: ಕುಪ್ಪೆಪದವಿನ ಕಲ್ಲಾಡಿ ನಿವಾಸಿ ದಿ. ಬಿ.ಎಂ. ಅಬ್ದುಲ್ ರಹಿಮಾನ್ ಬಲೆಮಾರ್ ಅವರ ಪತ್ನಿ ಖದೀಜಾ (92) ಶುಕ್ರವಾರ ಮುಸ್ಸಂಜೆ ಸ್ವಗೃಹದಲ್ಲಿ ನಿಧನರಾದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ, ನ್ಯಾಯವಾದಿ-ನೋಟರಿ ಬಿ.ಎ.ಮುಹಮ್ಮದ್ ಹನೀಫ್ ಹಾಗೂ ಸಾಮಾಜಿಕ ಕಾರ್ಯಕರ್ತ ಬಿ.ಎ. ಅಬೂಬಕರ್ ಕಲ್ಲಾಡಿ ಸಹಿತ ಮೂವರು ಪುತ್ರರು ಮತ್ತು ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಮೃತರು ಅಗಲಿದ್ದಾರೆ.
ಶನಿವಾರ ಬೆಳಗ್ಗೆ 10ಕ್ಕೆ ಕುಪ್ಪೆಪದವು ಸಮೀಪದ ಬಾರ್ದಿಲದ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಬಳಿ ದಫನ ಕಾರ್ಯ ನೆರವೇರಿಸಲಾಗುವುದು ಕುಟುಂಬಸ್ಥರು ತಿಳಿಸಿದ್ದಾರೆ.