×
Ad

ಗುಂಡ್ಮಿ ಕರುಣಾಕರ ಶೇರಿಗಾರ್

Update: 2026-07-07 19:46 IST

ಉಡುಪಿ, ಜು.7: ಸಾಸ್ತಾನದ ಗುಂಡ್ಮಿ ನಿವಾಸಿಯಾದ ಉದ್ಯಮಿ ಕರುಣಾಕರ ಶೇರಿಗಾರ (68) ಅಸೌಖ್ಯದಿಂದ ಸೋಮವಾರ ನಿಧನರಾದರು. ಇವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಹವ್ಯಾಸಿ ಯಕ್ಷಗಾನ ಕಲಾವಿದರಾದ ಇವರು ಭೀಷ್ಮ, ಭಸ್ಮಾಸುರ, ಕರ್ಣ, ಪರಶುರಾಮ ಮೊದಲಾದ ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದರು. ಪ್ರಸಿದ್ಧ ಭಾಗವತರಾದ ಕಾಳಿಂಗ ನಾವುಡರ ಅಭಿಮಾನಿಯೂ, ಆತ್ಮೀಯ ಒಡನಾಡಿ ಯೂ ಆಗಿದ್ದರು. ದೇಶಗಳಲ್ಲೂ ಹಲವು ಪ್ರದರ್ಶನಗಳನ್ನು ನೀಡಿದ್ದ ಇವರು ಪ್ರಿಂಟಿಂಗ್ ಲ್ಯಾಬ್ ಸೇರಿದಂತೆ ಹಲವು ಉದ್ಯಮಗಳಲ್ಲಿ ತೊಡಗಿಸಿ ಕೊಂಡಿದ್ದರು.

ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಝೈನಬ