×
Ad

ಜಮಾಅತೆ ಇಸ್ಲಾಮೀ ಹಿಂದ್ ನವಲಗುಂದ ವತಿಯಿಂದ ʼಸೌಹಾರ್ದ ಇಫ್ತಾರ್ ಕೂಟʼ ಆಯೋಜನೆ

Update: 2026-03-08 23:19 IST

ಧಾರವಾಡ : ʼಇಂದು ಜಾತಿ-ಧರ್ಮ ಹಾಗೂ ಭಾಷೆಯ ಆಧಾರದಲ್ಲಿ ಜನರನ್ನು ವಿಂಗಡಿಸುತ್ತಿರುವುದು ನಿಜಕ್ಕೂ ಅಪಾಯಕಾರಿ ಬೆಳವಣಿಗೆಯಾಗಿದ್ದು, ಧರ್ಮವನ್ನು ನಂಬುವವರು ಸಮಾನತೆಯ ಪ್ರತಿಪಾದಕರಾಗಬೇಕು" ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ರಾಜ್ಯ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು.

ಅವರು ನಗರದ ಅಂಬೇಡ್ಕರ್ ಭವನದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನವಲಗುಂದ ವತಿಯಿಂದ ಆಯೋಜಿಸಿದ್ದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.

ಸಾಮಾಜಿಕ ಕಾರ್ಯಕರ್ತ ಈರಣ್ಣ ಶಿಡಗಂಟಿ ಮಾತನಾಡಿ, "ದೇಶದ ದೊಡ್ಡ ಪಿಡುಗು ಅಸ್ಪೃಶ್ಯತೆ ಆಚರಣೆಯಾಗಿದೆ, ಇಂದು ಮಸೀದಿ ಅಥವಾ ದರ್ಗಾಗಳಿಗೆ ಭೇಟಿ ನೀಡುವಾಗ ದಲಿತರಿಗೆ ಯಾವ ಅಡೆತಡೆಗಳು ಇರುವುದಿಲ್ಲ. ಆದರೆ ಕೆಲವು ಕಡೆಗಳಲ್ಲಿ ಇವರ ಪ್ರವೇಶವು ನಿಷೇಧವಾಗಿರುವುದು, ನಿಜಕ್ಕೂ ಆತಂಕದ ಸಂಗತಿಯಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.

ಜ.ಇ.ಹಿಂದ್ ಸ್ಥಾನಿಯ ಅಧ್ಯಕ್ಷ ಮುಖ್ತಾರ್ ಅಹ್ಮದ್ ಎಂ.ಕೆ. ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ಸಮಾರಂಭವು ಕುರ್‌ಆನ್‌ ಪಠಣದೊಂದಿಗೆ ಪ್ರಾರಂಭಗೊಂಡಿತು.

ಜಾಫರ್ ಸಾದಿಕ್ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.






 


 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News