ಧಾರವಾಡ: ಲಾರಿ ಮತ್ತು ಕಾರೊಂದರ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನವಲಗುಂದ ತಾಲೂಕಿನ ಅಮರಗೋಳ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.

ಬಸವನಬಾಗೇವಾಡಿ ತಾಲೂಕಿನ ಮದಗಾಣ ಗ್ರಾಮದ ಅಜಿತ್ ಪ್ರಭು ಅಲ್ಲಾಪೂರ(38), ಚಡಚಣ ತಾಲೂಕಿನ ಬರ್ಡೋಲಿ ಗ್ರಾಮದ ರಾಕೇಶ ಅನಿಲ ಭೋಸ್ಲೆ (22), ಅದೇ ಗ್ರಾಮದವರಾದ ಸಂದೀಪ ಗಣಪತಿ ಶಿಂಧೆ(33) ಸಾಗರ ತಾಲೂಕಿನ ಶಿರವಾಳ ಗ್ರಾಮದ ಶ್ರುತಿ ನವೀನ ಕುಮಾರ ಎಸ್ ಜಿ. (28) ಮೃತಪಟ್ಟವರು.

ಕಾರಿನಲ್ಲಿದ್ದವರು ಹುಬ್ಬಳ್ಳಿ ಯಿಂದ ವಿಜಯಪುರಕ್ಕೆ ನವಲಗುಂದ ಮಾರ್ಗವಾಗಿ ಹೋಗುತ್ತಿದ್ದ ವೇಳೆ ಅಮರಗೋಳ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ.

ಈ ಬಗ್ಗೆ ನವಲಗುಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಎಸ್ಪಿ ಗುಂಜನ್ ಆರ್ಯ, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ರವಿ ಕಪ್ಪತ್ತನವರ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಪಿಎಸ್ಸೈ ಚಂದ್ರಶೇಖರ ಸಾಗನೂರ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor