ಹುಬ್ಬಳ್ಳಿ: ಕಬ್ಬಿಗೆ ಕನಿಷ್ಠ 5,500 ರೂ. ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ಜಂಗ್ಲಿಪೇಟೆಯ ಬಸವೇಶ್ವರ ಸೇವಾ ಸಮಿತಿ ರೈತ ಸಂಘಟನೆ ಸದಸ್ಯರು ನಗರದ ಹಳೇಹುಬ್ಬಳ್ಳಿ ದುರ್ಗದಬೈಲ್, ಇಂಡಿಪಂಪ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಹಳೇಹುಬ್ಬಳ್ಳಿ ಚನ್ನಪೇಟೆ, ಗೌಳಿಗಲ್ಲಿ, ಹಿರೇಪೇಟೆ, ದುರ್ಗದಬೈಲ್ ವೃತ್ತ, ಇಂಡಿಪಂಪ್ ವೃತ್ತದ ಸುತ್ತಮುತ್ತಲಿನ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದರು. ರೈತ ಪ್ರತಿಭಟನೆಗೆ ಸಹಕಾರ ನೀಡುವಂತೆ ವಿನಂತಿಸಿದರು. ವಾಹನಗಳ ಸಂಚಾರ ತಡೆದು ಧರಣಿ ಆರಂಭಿಸಿದ್ದಾರೆ. ಕೆಲವು ರೈತರು ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಅದರಗುಂಚಿ ಕ್ರಾಸ್ ನ ಗಣೇಶ ಹೋಟೆಲ್ ಬಳಿ ಹಾಗೂ ಗಬ್ಬೂರ ಕ್ರಾಸ್ ನಲ್ಲಿ ಪ್ರತಿಭಟನೆಗೆ ನಿಷೇಧಾಜ್ಞೆ ಇರುವ ಹಿನ್ನೆಲೆಯಲ್ಲಿ, ನಗರ ಪ್ರದೇಶದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಶಿವಾನಂದ ಹೊಸೂರು, ಚನ್ನಪ್ಪ ಅಂಗಡಿ, ವಿರೂಪಾಕ್ಷಪ್ಪ, ಬಸವರಾಜ ಮಾವನೂರ, ಸಿದ್ದಪ್ಪ ಕಂಬಳಿ ಸೇರಿದಂತೆ 50ಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor