ಫಿಫಾ ಕ್ಲಬ್ ವಿಶ್ವಕಪ್: ರಿಯಲ್ ಮ್ಯಾಡ್ರಿಡ್ ಗೆ ರೋಚಕ ಜಯ
ಗೊಂಝಾಲೊ ಗಾರ್ಸಿಯಾ PC: x.com/topsportinews
ಗೊಂಝಾಲೊ ಗಾರ್ಸಿಯಾ 54ನೇ ನಿಮಿಷದಲ್ಲಿ ಹೊಡೆದ ಅದ್ಭುತ ಹೆಡರ್ ನೆರವಿನಿಂದ ರಿಯಲ್ ಮ್ಯಾಡ್ರಿಡ್ ತಂಡ ಫಿಫಾ ಕ್ಲಬ್ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಜ್ಯುವೆಂಟಸ್ ವಿರುದ್ಧ ಜಯ ಸಾಧಿಸಿತು. ಇದರೊಂದಿಗೆ ರಿಯಲ್ ಮ್ಯಾಡ್ರಿಡ್ ತಂಡ ಕ್ವಾರ್ಟರ್ ಫೈನಲ್ ಸ್ಥಾನವನ್ನು ಖಾತರಿಪಡಿಸಿಕೊಂಡಿತು.
ಸ್ಪೇನ್ ನ ಈ ಕ್ಲಬ್ ಮುಂದಿನ ಸುತ್ತಿನ ಪಂದ್ಯದಲ್ಲಿ ಬೊರೂಸಿಯಾ ಡಾರ್ಟ್ಮಂಡ್ ಮತ್ತು ಮೆಕ್ಸಿಕೋದ ಮಾಂಟೆರಿ ನಡುವಿನ ಪಂದ್ಯದ ವಿಜೇತ ತಂಡವನ್ನು ಎದುರಿಸಲಿದೆ. ಕ್ಸಬಿ ಅಲೋನ್ಸೊ ನೇತೃತ್ವದ ಮ್ಯಾಡ್ರಿಡ್ ತಂಡ ಪಂದ್ಯದಲ್ಲಿ ಉತ್ತಮ ಹಿಡಿತ ಸಾಧಿಸಿ ಗಮನ ಸೆಳೆಯಿತು. ಅಸ್ವಸ್ಥತೆ ಕಾರಣದಿಂದ ಮೈದಾನದಿಂದ ಹೊರಗುಳಿದಿದ್ದ ಕಿಲಿಯನ್ ಎಂಬಾಪೆ 68ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕೆ ಇಳಿದಿದ್ದು, ತಂಡಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
ಟೂರ್ನಿಯ 16ರ ಸುತ್ತಿನ ಇತರ ಪಂದ್ಯಗಳಲ್ಲಿ ಡೋರ್ಟ್‌ಮಂಡ್ ಕ್ಲಬ್ ಮಾಂಟೆರಿ ವಿರುದ್ಧ 2-0, ಅಲ್ ಹಿಲಾಲ್ ಕ್ಲಬ್ ಮ್ಯಾನ್ ಸಿಟಿ ತಂಡದ ವಿರುದ್ಧ 4-3, ಬೆಯರ್ನ್ ಕ್ಲಬ್ ಫ್ಲೆಮೆಂಗೊ ವಿರುದ್ಧ 4-2 ಗೋಲುಗಳ ಜಯ ಸಾಧಿಸಿವೆ.