×
Ad

ಗದಗ | ಕಳ್ಳತನ ಪ್ರಕರಣ : ಆರೋಪಿಯ ಬಂಧನ

Update: 2025-07-06 19:59 IST

ಗದಗ : ಕಾರಿನಲ್ಲಿಟ್ಟಿದ್ದ ನಾಲ್ಕು ಬಂಗಾರದ ಬಳೆಗಳನ್ನು ಕಳ್ಳತನ ಮಾಡಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸುವಲ್ಲಿ ಗದಗನ ಬೆಟಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ನಿವಾಸಿ ಶಿಲ್ಪಾ ಬಿರಾದಾರ ಎನ್ನುವವರು ಗದಗನ ಬೇಟಗೇರಿಯ ಅವರ ಸಂಬಂಧಿಗಳ ಮನೆಗೆ ಮದುವೆಗೆಂದು ಬಂದಿದ್ದಾರೆ. ಈ ವೇಳೆ ಮೇ.15 ರಂದು ಬಾಗಲಕೋಟೆ ಜಿಲ್ಲೆಯ ಮುದ್ದೆಬಿಹಾಳದಲ್ಲಿ ಅವರ ಸಂಬಂಧಿಕರು ಮೃತಪಟ್ಟಿರುವ ಹಿನ್ನಲೆಯಲ್ಲಿ, ಗದಗದ ಟ್ರಾವೆಲ್ಸ್ ವೊಂದರಲ್ಲಿ ಬಾಡಿಗೆಗೆ ಕಾರು ತೆಗೆದುಕೊಂಡು, ಗದಗನಿಂದ ಮುದ್ದೆಬಿಹಾಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ತಮ್ಮ ಬ್ಯಾಗನ್ನು ಬಾಡಿಗೆಗೆ ಬಂದಿದ್ದ ಅದೇ ಕಾರಿನ ಢಿಕ್ಕಿಯಲ್ಲಿ ಬಿಟ್ಟು, ಮೃತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ನಂತರ ಅವರ ಬ್ಯಾಗ್ ನೋಡಿದಾಗ ಅವರ ನಾಲ್ಕು ಬಂಗಾರದ ಬಳೆಗಳು ಕಾಣೆಯಾಗಿತ್ತು ಎನ್ನಲಾಗಿದೆ.

ಘಟನೆಯಿಂದ ಬಂಗಾರದ ಬಳೆಗಳನ್ನು ಕಳೆದುಕೊಂಡಿದ್ದ ಮಹಿಳೆ ಗಾಬರಿಗೊಂಡ, ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಬೆಟಗೇರಿ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ  ಯಶಸ್ವಿಯಾಗಿದ್ದಾರೆ.

ಕೃತ್ಯಕ್ಕೆ ಬಳಸಿದ ಕಾರು, 45 ಗ್ರಾಂ ನ ನಾಲ್ಕು ಬಂಗಾರದ ಬಳೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣವನ್ನು ಬೇಧಿಸಿದ ಪಿಎಸ್ಐ ಎಲ್.ಎಂ. ಆರಿ ಮತ್ತು ಸಿಬ್ಬಂದಿಗಳಾದ ಎಸ್.ಎ.ಗುಡ್ಡಿಮಠ, ಪಿ.ಆರ್.ರಾಥೋಡ್, ಕೆ.ಡಿ.ಜಮಾದಾರ, ಎಂ.ಎಸ್.ಗಾಣಿಗೇರ, ಎಸ್.ಡಿ.ಬಳ್ಳಾರಿ, ಯಡಿಯಾಪುರ, ಹಾಗೂ ಭರಮಗೌಡ ಅವರಿಗೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News