ದುಬೈ: ಆಹಾರ ಕ್ಷೇತ್ರದಲ್ಲಿನ ಕೊಡುಗೆಗೆ ಫ್ಲಾರ್ ಮಾಸ್ಟರ್ಸ್ಗೆ ‘ಕ್ಲಸ್ಟರ್ ಚಾಂಪಿಯನ್’ ಪ್ರಶಸ್ತಿ
ಫ್ಲಾರ್ ಮಾಸ್ಟರ್ಸ್ ಬೇಕರಿಯ ಹಿರಿಯ ನಿರ್ವಹಣಾ ತಂಡ ಮತ್ತು ಸದಸ್ಯರೊಂದಿಗೆ ಹನಿ ಎಂ. ಹನೀಫ್ ಹಾಗೂ ಶಹನಾಝ್ ಹನೀಫ್ ಅವರು ‘ಫ್ಯೂಚರ್ ಫುಡ್ 2026’ರಲ್ಲಿ ಸಲೇಹ್ ಅಬ್ದುಲ್ಲಾ ಲೂತಾ ಮತ್ತು ಡಾ. ಮಾರಿಯಾ ಹನೀಫ್ ಅಲ್ ಕಾಸಿಮ್ ಅವರಿಂದ ‘ಕ್ಲಸ್ಟರ್ ಚಾಂಪಿಯನ್ ಅವಾರ್ಡ್ 2026’ ಸ್ವೀಕರಿಸಿದರು.
ದುಬೈ (ಯುಎಇ): ಆಹಾರ ಕ್ಷೇತ್ರಕ್ಕೆ ನೀಡಿದ ಗಮನಾರ್ಹ ಕೊಡುಗೆಗಾಗಿ HMH ಹೋಲ್ಡಿಂಗ್ ಕಂಪೆನಿಯ ಅಂಗಸಂಸ್ಥೆ ‘ಫ್ಲಾರ್ ಮಾಸ್ಟರ್ಸ್ ಬೇಕರಿ ಎಲ್‌ಎಲ್‌ಸಿ’ಗೆ ‘ಕ್ಲಸ್ಟರ್ ಚಾಂಪಿಯನ್ ಅವಾರ್ಡ್ 2026’ ಪ್ರಶಸ್ತಿ ಲಭಿಸಿದೆ.
ಯುಎಇ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಸಚಿವಾಲಯದ ಆಶ್ರಯದಲ್ಲಿ ‘ಯುಎಇ ಫುಡ್ ಕ್ಲಸ್ಟರ್’ ಆಯೋಜಿಸಿದ್ದ ‘ಫ್ಯೂಚರ್ ಫುಡ್ 2026’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆಹಾರ ಕ್ಷೇತ್ರದ ಭವಿಷ್ಯದ ಕುರಿತು ಚರ್ಚಿಸಲು ಸರಕಾರದ ಪ್ರತಿನಿಧಿಗಳು, ಉದ್ಯಮ ವಲಯದ ನಾಯಕರು ಹಾಗೂ ಆಹಾರ ಉದ್ಯಮದ ಪ್ರಮುಖರನ್ನು ಒಂದೆಡೆ ಸೇರಿಸಿದ್ದ ಕಾರ್ಯಕ್ರಮವನ್ನು ಯುಎಇ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಸಚಿವ ಅಬ್ದುಲ್ಲಾ ಬಿನ್ ತೌಕ್ ಅಲ್ ಮಾರಿ ಉದ್ಘಾಟಿಸಿದರು.
ಆಹಾರ ಕ್ಷೇತ್ರಕ್ಕೆ ಫ್ಲಾರ್ ಮಾಸ್ಟರ್ಸ್ ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಯುಎಇ ಫುಡ್ ಕ್ಲಸ್ಟರ್ ಮತ್ತು ಯುಎಇ ಫುಡ್ ಆಂಡ್ ಬೆವರೇಜ್ ಮ್ಯಾನುಫ್ಯಾಕ್ಚರರ್ಸ್ ಗ್ರೂಪ್ ಅಧ್ಯಕ್ಷ ಸಲೇಹ್ ಅಬ್ದುಲ್ಲಾ ಲೂತಾ ಹಾಗೂ ಯುಎಇ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಸಚಿವಾಲಯದ ನೀತಿಗಳು ಮತ್ತು ಆರ್ಥಿಕ ಅಧ್ಯಯನಗಳ ವಿಭಾಗದ ಸಹಾಯಕ ಅಂಡರ್‌ಸೆಕ್ರೆಟರಿ ಡಾ. ಮಾರಿಯಾ ಹನೀಫ್ ಅಲ್ ಕಾಸಿಮ್ ಪ್ರಶಸ್ತಿ ಪ್ರದಾನ ಮಾಡಿದರು.
HMH ಹೋಲ್ಡಿಂಗ್‌ನ ಸ್ಥಾಪಕ ಅಧ್ಯಕ್ಷ ಹಾಗೂ ಫ್ಲಾರ್ ಮಾಸ್ಟರ್ಸ್ ಬೇಕರಿಯ ಸ್ಥಾಪಕ ಮತ್ತು ಸಿಇಒ ಹನಿ ಎಂ. ಹನೀಫ್ ಹಾಗೂ ಬೇಕರಿಯ ಸಹ-ಸ್ಥಾಪಕಿ ಮತ್ತು ನಿರ್ದೇಶಕಿ ಶಹನಾಝ್ ಹನೀಫ್ ಅವರು ಕಂಪೆನಿಯ ಹಿರಿಯ ಆಡಳಿತ ಮಂಡಳಿ ಹಾಗೂ ತಂಡದ ಸದಸ್ಯರೊಂದಿಗೆ ಪ್ರಶಸ್ತಿ ಸ್ವೀಕರಿಸಿದರು. ಈ ಗೌರವವು ಇಡೀ ಫ್ಲಾರ್ ಮಾಸ್ಟರ್ಸ್ ತಂಡದ ಸಾಮೂಹಿಕ ಪ್ರಯತ್ನದ ಫಲ ಎಂದು ಕಂಪೆನಿ ಹೇಳಿದೆ.
25ಕ್ಕೂ ಹೆಚ್ಚು ದೇಶಗಳಲ್ಲಿ ಮಾರುಕಟ್ಟೆ
ಉಮ್ ಅಲ್ ಕುವೈನ್‌ನಲ್ಲಿರುವ ಅತ್ಯಾಧುನಿಕ ಹಾಗೂ ಸಂಪೂರ್ಣ ಸ್ವಯಂಚಾಲಿತ ಉತ್ಪಾದನಾ ಘಟಕದಿಂದ ಫ್ಲಾರ್ ಮಾಸ್ಟರ್ಸ್ ಬೇಕರಿ ಕಾರ್ಯನಿರ್ವಹಿಸುತ್ತಿದೆ. ಕಂಪೆನಿಯು ತನ್ನದೇ ಬ್ರಾಂಡ್‌ಗಳ ಜತೆಗೆ ಚಿಲ್ಲರೆ ವ್ಯಾಪಾರಿಗಳು ಮತ್ತು ವಿತರಕರನ್ನು ಒಳಗೊಂಡ ಪ್ರಮುಖ ಖಾಸಗಿ-ಲೇಬಲ್ ಪಾಲುದಾರರಿಗಾಗಿ ಟೋರ್ಟಿಲ್ಲಾ ಮತ್ತು ಫ್ಲಾಟ್‌ಬ್ರೆಡ್‌ಗಳನ್ನು ಉತ್ಪಾದಿಸುತ್ತದೆ.
25ಕ್ಕೂ ಹೆಚ್ಚು ದೇಶಗಳಲ್ಲಿ 50ಕ್ಕೂ ಹೆಚ್ಚು ಬ್ರಾಂಡ್‌ಗಳು ಹಾಗೂ 200 ಗ್ರಾಹಕರಿಗೆ ಸಂಸ್ಥೆ ಸೇವೆ ಸಲ್ಲಿಸುತ್ತಿದೆ. ಇದು ಕಂಪೆನಿಯ ಅಂತಾರಾಷ್ಟ್ರೀಯ ವ್ಯಾಪ್ತಿ ವಿಸ್ತರಿಸುತ್ತಿರುವುದನ್ನು ತೋರಿಸುತ್ತದೆ.
ಆವಿಷ್ಕಾರ ಮತ್ತು ಬದಲಾಗುತ್ತಿರುವ ಗ್ರಾಹಕರ ಆದ್ಯತೆಗಳಿಗೆ ಒತ್ತು ನೀಡುತ್ತಿರುವ ಫ್ಲಾರ್ ಮಾಸ್ಟರ್ಸ್, ಸಾಂಪ್ರದಾಯಿಕ, ಸಂಪೂರ್ಣ ಗೋಧಿ ಹಾಗೂ ವಿಶೇಷ ಟೋರ್ಟಿಲ್ಲಾಗಳ ಜತೆಗೆ ‘ಕ್ಲೀನ್-ಲೇಬಲ್’ ಅಂದರೆ ಸರಳ ಮತ್ತು ನೈಸರ್ಗಿಕ ಪದಾರ್ಥಗಳನ್ನು ಒಳಗೊಂಡ ಉತ್ಪನ್ನಗಳನ್ನೂ ಅಭಿವೃದ್ಧಿಪಡಿಸುತ್ತಿದೆ.
ಚಿಲ್ಲರೆ ಮಾರಾಟ, ಆಹಾರ ಸೇವೆ ಹಾಗೂ ಗುತ್ತಿಗೆ ಉತ್ಪಾದನಾ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಸಂಸ್ಥೆ ಹೊಂದಿದೆ. ಉತ್ಪನ್ನಗಳನ್ನು ತಾಜಾ, ಶೀತಲೀಕರಿಸಿದ, ಸಾಮಾನ್ಯ ತಾಪಮಾನದ ಹಾಗೂ ಹೆಪ್ಪುಗಟ್ಟಿದ ರೂಪಗಳಲ್ಲಿ ಪೂರೈಸಲಾಗುತ್ತಿದೆ.
ಗುಣಮಟ್ಟದ ಬದ್ಧತೆಗೆ HACCP, ಹಲಾಲ್ ಮತ್ತು ISO 22000:2018 ಪ್ರಮಾಣೀಕರಣಗಳಿವೆ. ಯಾಂತ್ರೀಕೃತಗೊಳಿಸುವಿಕೆ, ಉತ್ಪನ್ನ ಅಭಿವೃದ್ಧಿ ಮತ್ತು ಆಹಾರ ಸುರಕ್ಷತೆಯಲ್ಲಿ ಹೂಡಿಕೆ ಮಾಡುವ ಮೂಲಕ ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುವ ಹಾಗೂ ಯುಎಇ ಆಹಾರ ಕ್ಷೇತ್ರದ ಬೆಳವಣಿಗೆಗೆ ಬೆಂಬಲ ನೀಡುವ ಕಾರ್ಯವನ್ನು ಸಂಸ್ಥೆ ಮುಂದುವರಿಸಿದೆ.
‘ಇಡೀ ತಂಡಕ್ಕೆ ಸಲ್ಲುವ ಗೌರವ’
ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿದ ಹನಿ ಎಂ. ಹನೀಫ್, “ಯುಎಇ ಫುಡ್ ಕ್ಲಸ್ಟರ್‌ನಿಂದ ಈ ಮನ್ನಣೆ ಪಡೆಯುತ್ತಿರುವುದು ನಮಗೆ ಗೌರವದ ವಿಷಯ. ಈ ಪ್ರಶಸ್ತಿಯು ನಮ್ಮ ಹಿರಿಯ ನಿರ್ವಹಣಾ ತಂಡ ಮತ್ತು ಈ ಸಾಧನೆಯನ್ನು ಸಾಧ್ಯವಾಗಿಸಿದ ಪ್ರತಿಯೊಬ್ಬ ತಂಡದ ಸದಸ್ಯರನ್ನು ಒಳಗೊಂಡ ಇಡೀ ಫ್ಲಾರ್ ಮಾಸ್ಟರ್ಸ್ ಕುಟುಂಬಕ್ಕೆ ಸಲ್ಲುತ್ತದೆ. ನಮ್ಮ ಗ್ರಾಹಕರು ಮತ್ತು ಪಾಲುದಾರರು ನಮ್ಮ ಮೇಲೆ ಇಟ್ಟಿರುವ ನಿರಂತರ ನಂಬಿಕೆಗಾಗಿ ಧನ್ಯವಾದಗಳು. ಆವಿಷ್ಕಾರ, ಗುಣಮಟ್ಟ ಹಾಗೂ ಯುಎಇ ಆಹಾರ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡುವ ನಮ್ಮ ಪ್ರಯತ್ನಗಳಿಗೆ ಅವರು ನೀಡುತ್ತಿರುವ ಬೆಂಬಲ ಮಹತ್ವದ್ದಾಗಿದೆ” ಎಂದರು.
ಉದ್ಯಮ ಸಹಯೋಗಕ್ಕೆ ಬೆಂಬಲ ನೀಡುತ್ತಿರುವ ಯುಎಇ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಸಚಿವಾಲಯ ಹಾಗೂ ಯುಎಇ ಫುಡ್ ಕ್ಲಸ್ಟರ್‌ಗೆ ಫ್ಲಾರ್ ಮಾಸ್ಟರ್ಸ್ ಬೇಕರಿ ಕೃತಜ್ಞತೆ ಸಲ್ಲಿಸಿದೆ. ದೇಶದ ಆಹಾರ ಕ್ಷೇತ್ರಕ್ಕೆ ಸಂಸ್ಥೆ ನೀಡುತ್ತಿರುವ ಕೊಡುಗೆಗಳನ್ನು ಗುರುತಿಸಿದ್ದಕ್ಕೂ ಧನ್ಯವಾದ ತಿಳಿಸಿದೆ.
ಸಂಸ್ಥೆಯ ಕುರಿತು
ಫ್ಲಾರ್ ಮಾಸ್ಟರ್ಸ್ ಬೇಕರಿ ಎಲ್‌ಎಲ್‌ಸಿ ಉಮ್ ಅಲ್ ಕುವೈನ್ ಮೂಲದ ಟೋರ್ಟಿಲ್ಲಾ ಮತ್ತು ಫ್ಲಾಟ್ ಬ್ರೆಡ್‌ಗಳ ಯುಎಇ ತಯಾರಕ ಸಂಸ್ಥೆಯಾಗಿದೆ. HMH ಹೋಲ್ಡಿಂಗ್ ಕಂಪೆನಿಯ ಸಮೂಹ ಸಂಸ್ಥೆಯಾಗಿರುವ ಇದು ತನ್ನದೇ ಬ್ರಾಂಡ್ ಗಳು, ಒಪ್ಪಂದದ ಉತ್ಪಾದನೆ ಹಾಗೂ ಖಾಸಗಿ-ಲೇಬಲ್ ಪಾಲುದಾರಿಕೆಗಳ ಮೂಲಕ ಚಿಲ್ಲರೆ ಮತ್ತು ಆಹಾರ ಸೇವಾ ಗ್ರಾಹಕರಿಗೆ ಸೇವೆ ಒದಗಿಸುತ್ತದೆ.
‘Where Goodness Rieses’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ಸ್ವಯಂಚಾಲಿತ ಉತ್ಪಾದನಾ ವ್ಯವಸ್ಥೆ ಮತ್ತು ಉತ್ಪನ್ನ ಅಭಿವೃದ್ಧಿಯ ಪರಿಣತಿಯನ್ನು ಬಳಸಿಕೊಂಡು ಯುಎಇ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಪೂರೈಸುತ್ತಿದೆ.