ಯುಎಇ: ಬಿಸಿಸಿಐ ವಾರ್ಷಿಕ ಮಹಾಸಭೆ; ಹಿದಾಯತ್ ಅಡ್ಡೂರು ಅಧ್ಯಕ್ಷರಾಗಿ ಪುನರಾಯ್ಕೆ, ಮುಷ್ತಾಕ್ ಕದ್ರಿ ಪ್ರಧಾನ ಕಾರ್ಯದರ್ಶಿ
ದುಬೈ: ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಅವರು ಮುಖ್ಯ ಪೋಷಕರಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (BCCI)ಯ ವಾರ್ಷಿಕ ಮಹಾಸಭೆ ರವಿವಾರ ದುಬೈಯ ಜುಮೈರಾದ ಕ್ರೌನ್ ಪ್ಲಾಝಾ ಹೋಟೆಲ್‌ನಲ್ಲಿ ನಡೆಯಿತು.
ಸಭೆಯಲ್ಲಿ ಯುಎಇ ಬಿಸಿಸಿಐ ಅಧ್ಯಕ್ಷರಾಗಿ 2026–2028ರ ಅವಧಿಗೆ ಹಿದಾಯತ್ ಅಡ್ಡೂರು ಅವರು ಎರಡನೇ ಬಾರಿ ಪುನರಾಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮುಷ್ತಾಕ್ ಕದ್ರಿ, ಖಜಾಂಚಿಯಾಗಿ ಹಂಝಾ ಎ. ಖಾದರ್, ಸಂಚಾಲಕರಾಗಿ ಅಶ್ರಫ್ ಶಾ ಮಾಂತೂರು ಇವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಬಶೀರ್ ಕಿನ್ನಿಂಗಾರ್ ಹಾಗೂ ಅಬ್ದುಲ್ ರೌಫ್ (ಅಬುಧಾಬಿ), ಕಾರ್ಯದರ್ಶಿಯಾಗಿ ಅನ್ಸಾಫ್, ಮಾಧ್ಯಮ ಮತ್ತು ಸಂವಹನ ವಿಭಾಗದ ಹೊಣೆಗಾರರಾಗಿ ಅಲ್ತಾಫ್ ಎಂ., ಸಲಹೆಗಾರರಾಗಿ ಮುಹಮ್ಮದ್ ಅಲಿ ಉಚ್ಚಿಲ್ ಹಾಗೂ ಅಶ್ರಫ್ ಬಾಳೆಹೊನ್ನೂರು ಅವರು ಆಯ್ಕೆಯಾದರು.
ಯುಎಇ ಘಟಕದ ಕಾರ್ಯಕಾರಿಣಿ ಸಮಿತಿಗೆ ಅನ್ವರ್ ಹುಸೈನ್ ಅಡ್ಡೂರು, ಸಲೀಂ ಮೂಡಬಿದ್ರೆ, ಸೂಫಿ ಅನ್ವರ್ ಹಾಗೂ ಶೋಯೆಬ್ ಅವರನ್ನು ಆಯ್ಕೆ ಮಾಡಲಾಯಿತು.
ಅಶ್ರಫ್ ಅವರ ಕಿರಾಅತ್‌ನೊಂದಿಗೆ ಆರಂಭಗೊಂಡ ಸಭೆಯಲ್ಲಿ ಅಶ್ರಫ್ ಶಾ ಮಾಂತೂರು ಸ್ವಾಗತಿಸಿದರು. ಅನ್ವರ್ ಹುಸೈನ್ ಅಡ್ಡೂರು ವಾರ್ಷಿಕ ವರದಿ ವಾಚಿಸಿದರು. ಹಂಝಾ ಎ. ಖಾದರ್ ಲೆಕ್ಕಪತ್ರಗಳನ್ನು ಮಂಡಿಸಿದರು.
ಬ್ಯಾರಿ ಉದ್ಯಮಿಗಳ ನೋಂದಾವಣೆಗೆ ಅವಕಾಶ
ಯುಎಇಯಲ್ಲಿ ಉದ್ಯಮ ನಡೆಸುತ್ತಿರುವ ಬ್ಯಾರಿ ಸಮುದಾಯದ ಉದ್ಯಮಿಗಳು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (BCCI)ಯಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೊಸದಾಗಿ ಸೇರ್ಪಡೆಯಾಗಲು ಆಸಕ್ತ ಉದ್ಯಮಿಗಳು bcciemirates@gmail.com ಈ ಇಮೇಲ್ ಮೂಲಕ ಸಂಪರ್ಕಿಸಬಹುದು.
ಹೊಸ ಸದಸ್ಯರಿಗೆ ಉದ್ಯಮ ವೃದ್ಧಿಗೆ ಅಗತ್ಯವಿರುವ ಮಾರ್ಗದರ್ಶನ, ವ್ಯವಹಾರ ಸಬಲೀಕರಣ, ಉದ್ಯಮ ಪ್ರಚಾರ, ಸೆಮಿನಾರ್‌ಗಳು, ಹೊಸ ಸ್ಟಾರ್ಟ್‌ಅಪ್‌ಗಳಿಗೆ ತಂತ್ರಜ್ಞಾನಾಧಾರಿತ ಸಲಹೆಗಳು, ಕೃತಕ ಬುದ್ಧಿಮತ್ತೆ (AI) ಆಧಾರಿತ ವ್ಯವಹಾರ ಪರಿಹಾರಗಳು ಹಾಗೂ ಪ್ರಸ್ತುತ ಉದ್ಯಮ ಕ್ಷೇತ್ರದಲ್ಲಿನ ಸವಾಲುಗಳನ್ನು ಎದುರಿಸಲು ಅಗತ್ಯ ಮಾರ್ಗದರ್ಶನ ನೀಡಲಾಗುವುದು ಎಂದು BCCI ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಯುಎಇಯಲ್ಲಿರುವ ಬ್ಯಾರಿ ಸಮುದಾಯದ ಎಲ್ಲಾ ಉದ್ಯಮಿಗಳು ಸಹಕಾರ ನೀಡುವಂತೆ BCCI ಮನವಿ ಮಾಡಿದೆ.