×
Ad

ಮರ್ಕಝುಲ್ ಹುದಾ ಜಿದ್ದಾ ಸಮಿತಿ : ಅಬ್ದುಲ್ ರಹ್ಮಾನ್ ಗಂಟಾಲ್ಕಟ್ಟೆ, ತಬ್ಶೀರ್ ಹನೀಫಿ ಸೂರಿಂಜೆ, ಮುಸ್ತಫಾ ಕಡಂಗ ಸಾರಥಿಗಳು

Update: 2026-01-10 13:51 IST

ಪುತ್ತೂರು–ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸೌದಿ ಅರೇಬಿಯಾ–ಜಿದ್ದಾ ಘಟಕದ ಮಹಾಸಭೆಯು ಜಿದ್ದಾದ ಶರಫಿಯಾ ಮಹಬ್ಬ ಸ್ಕ್ವೇರ್ ಸಭಾಂಗಣದಲ್ಲಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ. ಎಂ.ಎಸ್.ಎಂ. ಝೃನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಜಿದ್ದಾ ಘಟಕದ ಸಮಿತಿಯನ್ನು ರಚಿಸಲಾಯಿತು.

ಸಲಹೆಗಾರರು

ಫಾರೂಕ್ ಸಅದಿ ಹೆಚ್ ಕಲ್ಲು, ಫಾರೂಕ್ ಕಾಟಿಪಳ್ಳ, ಶಂಸುದ್ದೀನ್ ಮುಸ್ಲಿಯಾರ್ ಕೊಡಗು, ಮನ್ಸೂರ್ ಕಾಟಿಪಳ್ಳ, ಇಖ್ಬಾಲ್ ಹಾಜಿ ಉಳ್ಳಾಲ್.

ಪದಾಧಿಕಾರಿಗಳು

ಗೌರವಾಧ್ಯಕ್ಷರು: ಸಯ್ಯಿದ್ ನಾಫಿ ತಂಙಳ್ ನೂಜಿ

ಅಧ್ಯಕ್ಷರು: ಅಬ್ದುಲ್ ರಹ್ಮಾನ್ ಗಂಟಾಲ್ಕಟ್ಟೆ

ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ತಬ್ಶೀರ್ ಹನೀಫಿ ಸೂರಿಂಜೆ

ಕೋಶಾಧಿಕಾರಿ: ಮುಸ್ತಫಾ ಕಡಂಗ

ಉಪಾಧ್ಯಕ್ಷರು

ಅಶ್ರಫ್ ಎಂ.ಎಸ್. ಕಕ್ಕಿಂಜೆ,

ಕೆ.ಟಿ. ಮುಹಮ್ಮದ್ ಹಾಜಿ ಕುಕ್ಕಾಜೆ,

ಶಂಸುದ್ದೀನ್ ಮಡಂತ್ಯಾರ್.

ಕಾರ್ಯದರ್ಶಿಗಳು

ನಾಸಿರುದ್ದೀನ್ ಹೆಚ್ ಕಲ್ಲು, ರಫೀಕ್ ಗರಗಂದೂರು, ಶಾಫಿ ಪರ್ಪುಂಜ.

ಕಾರ್ಯಕಾರಿ ಸದಸ್ಯರು

ರಫೀಕ್ ಎರ್ಮಾಳ್, ಫಾರೂಕ್ ಬಂಟ್ವಾಳ, ಇಬ್ರಾಹಿಂ ಬಂಡಾಡ್, ಶಂಸುದ್ದೀನ್ ಕುಂತೂರು, ರಫೀಕ್ ನೆಲ್ಲಿಹುದಿಕೇರಿ, ಸುಲೈಮಾನ್ ಬಂಡಾಡ್, ಅಬ್ದುಲ್ ಲತೀಫ್ ಮರಕಡ, ಯಹ್ಯಾ ಝುಹ್ರಿ ಬಾಜಾರ, ಆರಿಫ್ ಉಚ್ಚಿಲ, ಹಾಸಿಫ್ ಪಕ್ಷಿಕೆರೆ, ಬಶೀರ್ ಗರಗಂದೂರು, ಜಾಬಿರ್ ಕೊಂಡಂಗೇರಿ, ನವಾಝ್ ಕೂಳೂರು, ಯಹ್ಯಾ ಹಾರೂನಿ ಬಿಳಿಯೂರು, ಆಸಿಫ್ ಕೋಟ, ಮನ್ಸೂರ್ ಕಲ್ಕಟ್ಟ, ನಾಸಿರ್ ಮಂಚಿ, ಅಬ್ದುಲ್ ಫತ್ತಾಹ್ ಅಮ್ಮುಂಜೆ, ಫಝಲ್ ದೇರಳಕಟ್ಟೆ, ಶರೀಫ್ ಸುಂಟಿಕೊಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ಮರ್ಕಝುಲ್ ಹುದಾ ಜಿದ್ದಾ ಘಟಕದ ಉಸ್ತುವಾರಿಯಾಗಿದ್ದ ಅಶ್ರಫ್ ಎಂ.ಎಸ್. ಕಕ್ಕಿಂಜೆ ಅವರು ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಾಗೂ ಮರ್ಕಝುಲ್ ಹುದಾ ಸೌದಿ ಅರೇಬಿಯಾ ಸಂಚಾಲಕರಾದ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕೆಸಿಎಫ್ ನಾಯಕರಾದ ಫಾರೂಕ್ ಸಅದಿ ಹೆಚ್ಕಲ್, ಫಾರೂಕ್ ಕಾಟಿಪಳ್ಳ, ಮನ್ಸೂರ್ ಕಾಟಿಪಳ್ಳ ಹಾಗೂ ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ (ಕಿಸ್ವಾ) ನಾಯಕರಾದ ಶಂಸುದ್ದೀನ್ ಮುಸ್ಲಿಯಾರ್ ಪೆರಾಜೆ, ಸುಹೈಲ್ ಸುಲ್ತಾನಿ ಬೇತ್ರಿ ಮತ್ತು ಮುಸ್ತಫಾ ಕಡಂಗ ಅವರು ನೂತನ ಸಮಿತಿಗೆ ಶುಭ ಹಾರೈಸಿದರು.

ಸಯ್ಯಿದ್ ನಾಫಿ ತಂಙಳ್ ನೂಜಿ ಅವರು ದುಆ ನೆರವೇರಿಸಿದರು.

ಕುಂಬ್ರ ಮರ್ಕಝ್ ಜಿದ್ದಾ ವಲಯ ಸಂಚಾಲಕ ಮುಸ್ತಫಾ ಸಖಾಫಿ ಗರಗಂದೂರು ಅವರು ಸ್ವಾಗತ ಭಾಷಣ ಮಾಡಿ, ಕೊನೆಯಲ್ಲಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News