×
Ad

ಜ.10ರಂದು ‘ಸಾಹೇಬಾನ್’ ಯುಎಇಯಿಂದ ದುಬೈನಲ್ಲಿ ‘ಕುಟುಂಬ ಸ್ನೇಹಕೂಟ’ : ಸಾಧಕರಿಗೆ, ಯುವ ಪ್ರತಿಭೆಗಳಿಗೆ ಸನ್ಮಾನ

Update: 2026-01-06 16:08 IST

ದುಬೈ : ದಕ್ಷಿಣ ಕನ್ನಡ ಮತ್ತು ಉಡುಪಿಯ ಉರ್ದು ಮಾತನಾಡುವ ಮುಸ್ಲಿಂ ಸಮುದಾಯವಾಗಿರುವ ಯುಎಇ ‘ಸಾಹೇಬಾನ್’ನಿಂದ ಜನವರಿ 10ರಂದು ದುಬೈಯ ಅಲ್ ಖಿಸೆಸ್ ಅಮಿಟಿ ಸ್ಕೂಲಿನಲ್ಲಿ ‘ಕುಟುಂಬ ಸ್ನೇಹಕೂಟ' ಆಯೋಜಿಸಲಾಗಿದೆ.

ಶನಿವಾರ ಬೆಳಗ್ಗೆ 10 ರಿಂದ ರಾತ್ರಿ 9ರವರಗೆ ನಡೆಯಲಿರುವ ‘ಕುಟುಂಬ ಸ್ನೇಹಕೂಟ'ದಲ್ಲಿ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ದಿನವಿಡೀ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು ಕಾರ್ಯಕ್ರಮ ಸಂಘಟಕ, ಪೋಷಕ ಎಚ್‌.ಎಂ.ಆಫ್ರೋಝ್ ಅಸ್ಸಾದಿ ತಿಳಿಸಿದ್ದಾರೆ.

ವಿವಿಧ ಬಗೆಯ ಆಟಗಳು(Games), ಅಡುಗೆ ಸ್ಪರ್ಧೆ (Cooking Competition), ಮನರಂಜನಾ ಕಾರ್ಯಕ್ರಮಗಳು (Entertainment), ಸ್ಟಾಲ್‌ಗಳು(Kiosks), ಯುವ ಪ್ರತಿಭೆಗಳಿಗೆ ಸನ್ಮಾನ (Felicitating Youth Talent), 'ಸಾಹೇಬಾನ್ ಎಕ್ಸಲೆನ್ಸ್ ಅವಾರ್ಡ್(Sahebaan Excellence Awards)' ಪ್ರದಾನ, ಅನೇಕ ಆಕರ್ಷಕ ಉಡುಗೊರೆಗಳನ್ನು ನೀಡುವ ಜೊತೆಗೆ, ಉಪಹಾರ, ಮಧ್ಯಾಹ್ನ ಭೋಜನ ಮತ್ತು ರಾತ್ರಿಭೋಜನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಸ್ಸಾದಿ ಅವರು ಹೇಳಿದ್ದಾರೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿದಾಯತ್ ಗ್ರೂಪ್‌ನ ಅಧ್ಯಕ್ಷ ಹಿದಾಯತುಲ್ಲಾ ಅಬ್ಬಾಸ್, ದುಬೈನ Nash ಎಂಜಿನಿಯರಿಂಗ್ ಕಂಪನಿಯ ಮಾಲೀಕ ಕೆ.ಎಸ್.ನಿಸಾರ್ ಅಹ್ಮದ್ ಹಾಗೂ ಕೆ.ಎಸ್.ಇಮ್ತಿಯಾಝ್‌ ಅಹ್ಮದ್ ಕಾರ್ಕಳ  ಮತ್ತು ಇತರ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News