ದುಬೈ| ಜ.10ರಂದು ಯುಎಇ ‘ಸಾಹೇಬಾನ್’ನಿಂದ 'ಕುಟುಂಬ ಸ್ನೇಹಕೂಟ'
ಡಾ.ಸಫ್ವಾನ್, ಮಥೀನ್ ಅಹಮದ್ ಚಿಲ್ಮಿ, ಶಫಿ ಶಾಬಾನ್, ಇಕ್ಬಾಲ್ ಮನ್ನಾರಿಗೆ 'ಸಾಹೇಬಾನ್ ಎಕ್ಸೆಲೆನ್ಸ್ ಅವಾರ್ಡ್'
ದುಬೈ : ಇಲ್ಲಿನ ಅಲ್ ಖಿಸೆಸ್ ಅಮಿಟಿ ಸ್ಕೂಲಿನಲ್ಲಿ ಯುಎಇ ‘ಸಾಹೇಬಾನ್’ನಿಂದ ಜ. 10ರ ಶನಿವಾರ ‘ಕುಟುಂಬ ಸ್ನೇಹಕೂಟ' ಆಯೋಜಿಸಲಾಗಿದ್ದು, ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟಕ, ಪೋಷಕ H.M. ಆಫ್ರೋಝ್ ಅಸ್ಸಾದಿ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 10ರಿಂದ ರಾತ್ರಿ 9ರವರಗೆ ನಡೆಯಲಿರುವ ‘ಕುಟುಂಬ ಸ್ನೇಹಕೂಟ'ದ ಸಮಾರೋಪ ಸಮಾರಂಭದಲ್ಲಿ 'ಸಾಹೇಬಾನ್ ಅಕಾಡಮಿಕ್ ಎಕ್ಸಲೆನ್ಸ್ ಅವಾರ್ಡ್ (Sahebaan Academic Excellence Award)'ನ್ನು ಖತರ್ (ದೋಹಾ)ನಲ್ಲಿರುವ ನ್ಯೂರಾಲಜಿಸ್ಟ್ ಡಾ.ಸಫ್ವಾನ್ ಅಹಮದ್ ಅವರಿಗೆ, ‘ಸಾಹೇಬಾನ್ ಬಿಸಿನೆಸ್ ಎಕ್ಸೆಲೆನ್ಸ್ ಅವಾರ್ಡ್ (Sahebaan Business Excellence Award)’ನ್ನು ದುಬೈಯ ಪೆಟ್ರೋಸೊಲ್ಯೂಷನ್ಸ್ ನ ಆಡಳಿತ ನಿರ್ದೇಶಕ ಮಥೀನ್ ಅಹಮದ್ ಚಿಲ್ಮಿ ಅವರಿಗೆ, ಸಾಹೇಬಾನ್ ಸ್ಪೋರ್ಟ್ಸ್ ಎಕ್ಸೆಲೆನ್ಸ್ ಅವಾರ್ಡ್ (Sahebaan Sports Excellence Award)'ನ್ನು ಕ್ರೀಡೆಗಳ ಉತ್ತೇಜನಕ್ಕಾಗಿ ಮೊಹಮ್ಮದ್ ಶಫಿ ಶಾಬಾನ್ ಅವರಿಗೆ ಹಾಗು ಸಾಹೇಬಾನ್ ಕಮ್ಯೂನಿಟಿ ಸರ್ವಿಸ್ ಅವಾರ್ಡ್ (Sahebaan Community Service Award)ನ್ನು ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಇಕ್ಬಾಲ್ ಮನ್ನಾರಿಗೆ ನೀಡಿ ಗೌರವಿಸಲಾಗುವುದು ಎಂದು ಅಸ್ಸಾದಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ‘ಸಾಹೇಬಾನ್’ ಪೋಷಕರಾದ ಹಿದಾಯತ್ ಗ್ರೂಪ್‌ನ ಅಧ್ಯಕ್ಷ ಹಿದಾಯತುಲ್ಲಾ ಅಬ್ಬಾಸ್, ದುಬೈನ Nash ಎಂಜಿನಿಯರಿಂಗ್ ಕಂಪನಿಯ ಮಾಲಿಕ ಕೆ.ಎಸ್.ನಿಸಾರ್ ಅಹ್ಮದ್, H.M.ಆಫ್ರೋಝ್ ಅಸ್ಸಾದಿ ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಯಾಗಿ KMES ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷ ಕೆ.ಎಸ್.ಇಮ್ತಿಯಾಝ್ ಅಹ್ಮದ್ ಕಾರ್ಕಳ, ಯಾಸೀನ್ ಮಲ್ಪೆ ಭಾಗವಹಿಸಲಿದ್ದಾರೆ.
ಬೆಳಗ್ಗಿನಿಂದ ಸಂಜೆಯವರೆಗೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ವಿವಿಧ ಬಗೆಯ ಆಟಗಳು, ಅಡುಗೆ ಸ್ಪರ್ಧೆ, ಮನರಂಜನಾ ಕಾರ್ಯಕ್ರಮಗಳು, ಯುವ ಪ್ರತಿಭೆಗಳಿಗೆ ಸನ್ಮಾನ (Felicitating Youth Talent), ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರಗಲಿದೆ ಎಂದು ಆಫ್ರೋಝ್ ಅಸ್ಸಾದಿ ಅವರು ತಿಳಿಸಿದ್ದಾರೆ.