×
Ad

IDBI ಬ್ಯಾಂಕ್ನಲ್ಲಿ ಪದವೀಧರರಿಗೆ ಉದ್ಯೋಗವಕಾಶ; ಯಾರು ಅರ್ಜಿ ಸಲ್ಲಿಸಬಹುದು?

Update: 2026-03-08 19:36 IST

Photo Credit : PTI 


ಬ್ಯಾಂಕ್ನಲ್ಲಿ ಕೆಲಸ ಮಾಡಿದ ಅನುಭವಿ ಸಹಾಯಕ ಮ್ಯಾನೇಜರ್ಗಳನ್ನು ಐಡಿಬಿಐ ಬ್ಯಾಂಕ್ ನೇಮಿಸಿಕೊಳ್ಳುತ್ತಿದೆ. ಅರ್ಜಿಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಎಂಬ ವಿವರ ಇಲ್ಲಿದೆ.


ಐಡಿಬಿಐ ಬ್ಯಾಂಕ್ ಲಿಮಿಟೆಡ್, ಜ್ಯೂನಿಯರ್ ಅಸಿಸ್ಟಂಟ್ ಮ್ಯಾನೇಜರ್ ಜೆಎಎಂ ಗ್ರೇಡ್ ಒ ಮತ್ತು ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ವೆಬ್ಸೈಟ್ನಲ್ಲಿ ಅಧಿಸೂಚನೆ ಬಿಡುಗಡೆ ಮಾಡಿದೆ. ಐಡಿಬಿಐ ಅರ್ಜಿ 2026 ಮಾರ್ಚ್ 8ರಿಂದ ಪ್ರಾರಂಭವಾಗಿದೆ ಮತ್ತು ಅಭ್ಯರ್ಥಿಗಳು 2026 ಮಾರ್ಚ್ 19ರವರೆಗೆ ಅರ್ಜಿ ಸಲ್ಲಿಸಬಹುದು. ಐಡಿಬಿಐ ನಿಯಮಗಳ ಪ್ರಕಾರ ಕನಿಷ್ಠ 20 ವರ್ಷ ವಯಸ್ಸು ಮತ್ತು ಗರಿಷ್ಠ 25 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಈ ಮುಂದಿನ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹುದು: https://www.idbi.bank.in/idbi-bank-careers-current-openings.aspx

📌 ಪ್ರಮುಖ ದಿನಾಂಕಗಳು

ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 2026 ಮಾರ್ಚ್ 8

ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2026 ಮಾರ್ಚ್ 19

ಶುಲ್ಕ ಪಾವತಿಗೆ ಕೊನೆಯ ದಿನಾಂಕ: 2026 ಮಾರ್ಚ್ 19

ಪರೀಕ್ಷೆಯ ದಿನಾಂಕ: ಶೀಘ್ರವೇ ಅಧಿಸೂಚನೆ ನೀಡಲಾಗುವುದು

ಅಡ್ಮಿಟ್ ಕಾರ್ಡ್: ಪರೀಕ್ಷೆಗೆ ಮೊದಲು

ಫಲಿತಾಂಶ ದಿನಾಂಕ: ಶೀಘ್ರವೇ ಅಧಿಸೂಚನೆ ನೀಡಲಾಗುವುದು

📌 ಅರ್ಜಿ ಶುಲ್ಕ

ಜನರಲ್/ಒಬಿಸಿ/ಇಡಬ್ಲ್ಯುಎಸ್: 1050 ರೂ.

ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ/ಮಹಿಳೆಯರು: 250 ರೂ.

ಪಾವತಿ ವಿಧಾನ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ.

📌 ವಯೋಮಿತಿ

ಕನಿಷ್ಠ ವಯಸ್ಸು 20 ವರ್ಷಗಳು

ಗರಿಷ್ಠ ವಯಸ್ಸು 25 ವರ್ಷಗಳು

ಐಡಿಬಿಐ ಅಧಿಸೂಚನೆಯ ಪ್ರಕಾರ ವಯಸ್ಸಿನಲ್ಲಿ ಸಡಿಲಿಕೆ ನೀಡಲಾಗುವುದು.

📌 ಹುದ್ದೆಗಳು

1300 ಹುದ್ದೆಗಳು

ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (ಜೆಎಎಂ), ಗ್ರೇಡ್ ‘ಒ’ - 1100 ಹುದ್ದೆ

ಸಹಾಯಕ ಮ್ಯಾನೇಜರ್ (ಗ್ರೇಡ್ ಎ) - 200 ಹುದ್ದೆ

📌 ಶೈಕ್ಷಣಿಕ ಅರ್ಹತೆ

1. ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (ಜೆಎಎಂ), ಗ್ರೇಡ್ ‘ಒ’

ಅಭ್ಯರ್ಥಿಗಳು ಭಾರತದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗಗಳ ಅರ್ಜಿದಾರರು ಕನಿಷ್ಠ ಶೇ 60ರಷ್ಟು ಅಂಕಗಳನ್ನು ಹೊಂದಿರಬೇಕು, ಆದರೆ ಎಸ್‌ಸಿ, ಎಸ್‌ಟಿ ಮತ್ತು ಪಿಹೆಚ್ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ತಮ್ಮ ಪದವಿಯಲ್ಲಿ ಕನಿಷ್ಠ ಶೇ 55 ಅಂಕಗಳನ್ನು ಹೊಂದಿರಬೇಕು.

2. ಸಹಾಯಕ ಮ್ಯಾನೇಜರ್ (ಗ್ರೇಡ್ ಎ)

ಅಭ್ಯರ್ಥಿಗಳು ಭಾರತದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಇದರ ಜೊತೆಗೆ, ಅರ್ಜಿದಾರರು ಕನಿಷ್ಠ 2 ವರ್ಷಗಳ ಸಂಬಂಧಿತ ಕೆಲಸದ ಅನುಭವವನ್ನು ಹೊಂದಿರಬೇಕು.

📌 ಆಯ್ಕೆ ಪ್ರಕ್ರಿಯೆ

• ಆನ್ಲೈನ್ ಪರೀಕ್ಷೆ

• ದಾಖಲೆ ಪರಿಶೀಲನೆ

• ಸಂದರ್ಶನ

ಹೆಚ್ಚಿನ ವಿವರಗಳಿಗೆ ಅಧಿಕೃತ ಸೂಚನೆಯನ್ನು ಗಮನಿಸಬೇಕಾಗಿ ವಿನಂತಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News