×
Ad

ಗಾಝಾದಲ್ಲಿ ಇಸ್ರೇಲ್ ಡ್ರೋನ್ ದಾಳಿ: 7 ಮಂದಿ ಮೃತ್ಯು

Update: 2024-01-17 23:22 IST

Image Source : PTI

ಗಾಝಾ: ಪಶ್ಚಿಮದಂಡೆಯಲ್ಲಿ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಹಮಾಸ್‍ನ 6 ಹೋರಾಟಗಾರರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಖಚಿತ ಮಾಹಿತಿಯ ಮೇಲೆ ನಡೆಸಿದ ಡ್ರೋನ್ ದಾಳಿಯಲ್ಲಿ ಮೃತಪಟ್ಟವರಲ್ಲಿ ಶಂಕಿತ ಗೂಢಚಾರರನ್ನು ವಿಚಾರಣೆ ನಡೆಸುವ ಹಮಾಸ್ ಸಮಿತಿಯ ಉಸ್ತುವಾರಿ ಅಧಿಕಾರಿ ಬಿಲಾಕ್ ನೌಫಲ್‌ ಕೂಡಾ ಸೇರಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.

ನೌಫಲ್‌ ಹತ್ಯೆ ಹಮಾಸ್ ಗುಂಪಿಗೆ ಭಾರೀ ಪ್ರಹಾರವಾಗಿದ್ದು ಹಮಾಸ್‍ನ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಕ್ರಮಗಳ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಇಸ್ರೇಲ್ ಭದ್ರತಾ ಪಡೆ ಹೇಳಿದೆ.

ಈ ಮಧ್ಯೆ, ಉತ್ತರ ಗಾಝಾದಲ್ಲಿ ಕಾರ್ಯಾಚರಣೆ ಸಂದರ್ಭ ಇಸ್ರೇಲ್‍ನ ಇಬ್ಬರು ಯೋಧರು ಮೃತಪಟ್ಟಿದ್ದು ಅಕ್ಟೋಬರ್ 7ರ ಬಳಿಕ ಗಾಝಾದಲ್ಲಿ ಇಸ್ರೇಲ್ ಪದಾತಿ ದಳದ ಕಾರ್ಯಾಚರಣೆ ಸಂದರ್ಭ ಮೃತಪಟ್ಟ ಇಸ್ರೇಲ್ ಯೋಧರ ಸಂಖ್ಯೆ 192ಕ್ಕೇರಿದೆ ಎಂದು ಸೇನೆಯ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News