ನೇಪಾಳ| ನದಿಗೆ ಉರುಳಿ ಬಿದ್ದ 40 ಮಂದಿ ಪ್ರಯಾಣಿಕರಿದ್ದ ಭಾರತದ ಬಸ್; 11 ಮಂದಿ ಮೃತ್ಯು
Update: 2024-08-23 12:48 IST
Image Credit: X/@Dubeyjilive
ಕಠ್ಮಂಡು: 40 ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಭಾರತದ ಬಸ್ ಒಂದು ನೇಪಾಳದ ತನಾಹುನ್ ಜಿಲ್ಲೆಯಲ್ಲಿರುವ ಮಾರ್ಸ್ಯಂಗ್ಡಿ ನದಿಗೆ ಶುಕ್ರವಾರ ಉರುಳಿ ಬಿದ್ದಿದ್ದು, 11 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಸ್ ನದಿ ದಡದಲ್ಲಿ ಬಿದ್ದಿದೆ ಎಂದು ತನಾಹುನ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಕುಮಾರ್ ರಾಯ ತಿಳಿಸಿದ್ದಾರೆ.
ಸಂಖ್ಯಾ ಫಲಕ UP FT 7623 ಹೊಂದಿರುವ ಬಸ್ ನದಿಗೆ ಉರುಳಿ ಬಿದ್ದಿದ್ದು, ನದಿಯ ದಡದಲ್ಲಿ ಬಿದ್ದಿದೆ ಎಂದು ಅವರು ಹೇಳಿದ್ದಾರೆ. ಸದರಿ ಬಸ್ ಪೋಖರಾದಿಂದ ಕಠ್ಮಂಡುಗೆ ತೆರಳುತ್ತಿತ್ತು ಎಂದು ಹೇಳಲಾಗಿದೆ. ಈಗಾಗಲೇ 11 ಮಂದಿಯ ಮೃತದೇಹ ಪತ್ತೆಯಾಗಿದೆ.