×
Ad

ಇರಾನ್–ಇಸ್ರೇಲ್ ಸಂಘರ್ಷ | ದುಬೈ ವಿಮಾನ ನಿಲ್ದಾಣದ ಬಳಿ ಸ್ಫೋಟದ ಶಬ್ದ; ವರದಿ

ಯುಎಇ ಕಡೆ ಕ್ಷಿಪಣಿ–ಡ್ರೋನ್ ದಾಳಿ ಬೆದರಿಕೆ

Update: 2026-03-07 12:40 IST
File Photo: PTI

ಅಬುಧಾಬಿ: ದುಬೈ ವಿಮಾನ ನಿಲ್ದಾಣದ ಮೇಲ್ಭಾಗದಲ್ಲಿ ಶನಿವಾರ ಸ್ಫೋಟದ ಶಬ್ದ ಕೇಳಿಬಂದಿದ್ದು, ಬಳಿಕ ಆಕಾಶದಲ್ಲಿ ಹೊಗೆಯ ಮೋಡ ಕಾಣಿಸಿಕೊಂಡಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು AFP ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ವಿಮಾನಗಳ ಸಂಚಾರವನ್ನು ಟ್ರ್ಯಾಕ್ ಮಾಡುವ Flightradar24 ವೆಬ್ಸೈಟ್ ಮಾಹಿತಿ ಪ್ರಕಾರ, ದುಬೈ ವಿಮಾನ ನಿಲ್ದಾಣದ ಮೇಲ್ಭಾಗದಲ್ಲಿ ಕೆಲವು ವಿಮಾನಗಳು ಸ್ಪಷ್ಟವಾದ ‘ಹೋಲ್ಡಿಂಗ್ ಪ್ಯಾಟರ್ನ್’(ಲ್ಯಾಂಡಿಂಗ್ ಅನುಮತಿಗಾಗಿ ಆಕಾಶದಲ್ಲಿ ಸುತ್ತಾಡುವುದು)ನಲ್ಲಿ ಸಂಚರಿಸುತ್ತಿರುವುದು ಗೋಚರಿಸಿದೆ.

ಈ ಮಧ್ಯೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕಡೆಗೆ ಬರುತ್ತಿರುವ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳಿಗೆ ತನ್ನ ವಾಯು ರಕ್ಷಣಾ ಪಡೆಗಳು ಪ್ರತಿಕ್ರಿಯಿಸುತ್ತಿವೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ.

ಇರಾನ್ ನಿಂದ ಉಡಾಯಿಸಲ್ಪಟ್ಟ ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ತಡೆಯುವ ಕಾರ್ಯಾಚರಣೆ ನಡೆಯುತ್ತಿದ್ದು, ಎಮಿರೇಟ್ ನ ವಿವಿಧ ಭಾಗಗಳಲ್ಲಿ ಕೇಳಿಬರುತ್ತಿರುವ ಶಬ್ದಗಳು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ತಡೆಯುವ ವೇಳೆ ಉಂಟಾಗಿವೆ ಎಂದು ಸಚಿವಾಲಯ ಹೇಳಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನೆಲೆಗಳ ಮೇಲೆ ನಡೆಯುತ್ತಿರುವ ದೈನಂದಿನ ಡ್ರೋನ್ ದಾಳಿಗಳ ನಡುವೆಯೂ, ಸೋಮವಾರದಿಂದ ಅಂತರರಾಷ್ಟ್ರೀಯ ಸಂಚಾರಕ್ಕೆ ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೀಮಿತ ಸಂಖ್ಯೆಯ ವಿಮಾನಗಳ ಕಾರ್ಯಾಚರಣೆ ಪುನರಾರಂಭಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News