×
Ad

ಇರಾನ್‌ನೊಂದಿಗೆ ಮಾತುಕತೆಯನ್ನು ನಿರಾಕರಿಸಿದ ಟ್ರಂಪ್: ಬೇಷರತ್ ಶರಣಾಗತಿಗೆ ಪಟ್ಟು

ಇರಾನ್ ಅನ್ನು ಮತ್ತೆ ಶ್ರೇಷ್ಠವಾಗಿಸುತ್ತೇನೆ ಎಂದ ಅಮೆರಿಕ ಅಧ್ಯಕ್ಷ

Update: 2026-03-06 22:17 IST

ಡೊನಾಲ್ಡ್ ಟ್ರಂಪ್ | Photo Credit : PTI 

ವಾಷಿಂಗ್ಟನ್: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿ ಮುಂದುವರಿಸಿರುವ ನಡುವೆ, ಇರಾನ್‌ನೊಂದಿಗೆ ಯಾವುದೇ ಮಾತುಕತೆ ಇಲ್ಲ; ಬೇಷರತ್ ಶರಣಾಗತಿಯ ಹೊರತುಪಡಿಸಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಟ್ರುತ್ ಸಾಮಾಜಿಕ ಮಾಧ್ಯಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

“ಬೇಷರತ್ ಶರಣಾಗತಿಯನ್ನು ಹೊರತುಪಡಿಸಿ ಇರಾನ್‌ನೊಂದಿಗೆ ಬೇರಾವುದೇ ಮಾತುಕತೆ ಇಲ್ಲ. ಇದಾದ ಬಳಿಕ ಇರಾನ್ ಅನ್ನು ಮತ್ತೆ ಶ್ರೇಷ್ಠವಾಗಿಸಲಾಗುವುದು. ಇರಾನ್ ಅನ್ನು ವಿನಾಶದ ಅಂಚಿನಿಂದ ಹೊರತರಲು ನಮ್ಮ ವೀರ ಮಿತ್ರರು ಹಾಗೂ ಪಾಲುದಾರರು ದಣಿವರಿಯದೆ ಕೆಲಸ ಮಾಡಲಿದ್ದಾರೆ. ಆ ಮೂಲಕ ಇರಾನ್ ಅನ್ನು ಎಂದೆಂದಿಗೂ ಆರ್ಥಿಕವಾಗಿ ಬೃಹತ್, ಉತ್ತಮ ಹಾಗೂ ಬಲಿಷ್ಠವಾಗಿಸಲಾಗುತ್ತದೆ. ಇರಾನ್‌ಗೆ ಅದ್ಭುತ ಭವಿಷ್ಯವಿದೆ. ಇರಾನ್ ಅನ್ನು ಮತ್ತೆ ಶ್ರೇಷ್ಠವಾಗಿಸಲಾಗುವುದು” ಎಂದು ಅವರು ಬರೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News