×
Ad

ಗ್ರೀಕ್ ದ್ವೀಪದ ಬಳಿ ವಲಸಿಗರ ದೋಣಿ ಮುಳುಗಿ 18 ಸಾವು

Update: 2025-12-15 23:38 IST

photo: AP

ಅಥೆನ್ಸ್, ಡಿ.15: ಗಾಳಿ ತುಂಬ ಬಹುದಾದ ದೋಣಿಯಲ್ಲಿ ಮೆಡಿಟರೇನಿಯನ್ ಸಮುದ್ರವನ್ನು ದಾಟಲು ಪ್ರಯತ್ನಿಸುತ್ತಿದ್ದ ಕನಿಷ್ಠ 18 ಮಂದಿ ವಲಸಿಗರು ದಕ್ಷಿಣ ಗ್ರೀಕ್‍ನ ಕ್ರೀಟ್ ದ್ವೀಪದ ಬಳಿ ದೋಣಿ ಮುಳುಗಿದಾಗ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ನೀರಿನಲ್ಲಿ ಅರ್ಧ ಮುಳುಗಿದ್ದ ದೋಣಿಯನ್ನು ಟರ್ಕಿಯ ಸರಕು ನೌಕೆ ಪತ್ತೆಹಚ್ಚಿ ಗ್ರೀಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಯುರೋಪಿಯನ್ ಗಡಿ ಏಜೆನ್ಸಿಯ ಹಡಗು ಮತ್ತು ವಿಮಾನ, ಗ್ರೀಕ್ ಕರಾವಳಿ ಕಾವಲು ಪಡೆಯ ಹೆಲಿಕಾಪ್ಟರ್ ಮತ್ತು ಮೂರು ಹಡಗುಗಳು ಪಾಲ್ಗೊಂಡಿದ್ದು ಇಬ್ಬರನ್ನು ರಕ್ಷಿಸಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಅಧಿಕಾರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News