ನಕಲಿ ಮಾತ್ರೆ ಮಾರಾಟ : ಇಬ್ಬರು ಭಾರತೀಯರಿಗೆ ಅಮೆರಿಕ ನಿರ್ಬಂಧ
Update: 2025-09-25 22:30 IST
ಸಾಂದರ್ಭಿಕ ಚಿತ್ರ | PC : freepik
ವಾಷಿಂಗ್ಟನ್, ಸೆ.25: ಫೆಂಟಾನಿಲ್ ಹಾಗೂ ಇತರ ಅಕ್ರಮ ಔಷಧ ತುಂಬಿದ್ದ ನಕಲಿ ಮಾತ್ರೆಗಳನ್ನು ಅಮೆರಿಕನ್ನರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಭಾರತೀಯರಿಗೆ ಹಾಗೂ ಭಾರತ ಮೂಲದ ಆನ್‌ಲೈನ್ ಔಷಧ ಸಂಸ್ಥೆಯ ವಿರುದ್ಧ ಅಮೆರಿಕ ನಿರ್ಬಂಧ ವಿಧಿಸಿರುವುದಾಗಿ ವರದಿಯಾಗಿದೆ.
ಕೆ.ಎಸ್. ಇಂಟರ್ನ್ಯಾಷನಲ್ ಟ್ರೇಡರ್ಸ್ ಎಂಬ ಸಂಸ್ಥೆಯನ್ನು ಹೊಂದಿರುವ ಮುಹಮ್ಮದ್ ಇಕ್ಬಾಲ್ ಶೇಖ್ ಮತ್ತು ಸಾದಿಕ್ ಅಬ್ಬಾಸ್ ಹಬೀಬ್ ಸಯ್ಯದ್ ಅಮೆರಿಕಾ ಮತ್ತು ಡೊಮಿನಿಕನ್ ಗಣರಾಜ್ಯದಲ್ಲಿ ಕಳ್ಳಸಾಗಣೆದಾರರ ಜೊತೆ ಸೇರಿಕೊಂಡು ನಕಲಿ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದು ಈ ಕಾರ್ಯಕ್ಕೆ ಆನ್‌ಲೈನ್ ಔಷಧ ಸಂಸ್ಥೆಯನ್ನು ಬಳಸುತ್ತಿದ್ದರು ಎಂದು ಅಮೆರಿಕಾದ ಹಣಕಾಸು ಇಲಾಖೆಯ ನಿರ್ಬಂಧ ವಿಭಾಗ ಆರೋಪಿಸಿದೆ.