×
Ad

ಕೆನಡಾ: ಭಾರತೀಯ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ

Update: 2024-04-14 15:31 IST

ಚಿರಾಗ್ ಅಂತಿಲ್ (Photo: gofundme)

ಹೊಸದಿಲ್ಲಿ: 24 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಕಾರಿನೊಳಗೆ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಕೆನಡಾದ ದಕ್ಷಿಣ ವ್ಯಾಂಕೋವರ್ ನಲ್ಲಿ ನಡೆದಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಗುಂಡಿನ ಸದ್ದು ಕೇಳಿ ಬಂತು ಎಂದು ನೆರೆಹೊರೆಯವರು ಪೊಲೀಸರಿಗೆ ವರದಿ ಮಾಡಿದ ನಂತರ, 24 ವರ್ಷದ ಚಿರಾಗ್ ಅಂತಿಲ್ ಎಂಬ ಭಾರತೀಯ ವಿದ್ಯಾ‍ರ್ಥಿಯು ಕಾರಿನೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ವ್ಯಾಂಕೋವರ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿರಾಗ್ ಮೃತದೇಹವನ್ನು ಭಾರತಕ್ಕೆ ಮರಳಿ ತರಲು ಚಿರಾಗ್ ಕುಟುಂಬದ ಸದಸ್ಯರು ‘GoFundMe’ ವೇದಿಕೆಯ ಮೂಲಕ ಕ್ರೌಂಡ್ ಫಂಡಿಂಗ್ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಚಿರಾಗ್ ಅಂತಿಲ್ ಅವರ ಸಹೋದರ ಹಾಗೂ ಹರ್ಯಾಣ ನಿವಾಸಿ ರೋಮಿಲ್ ಅಂತಿಲ್, ತನ್ನ ಸಹೋದರನು ಮೃದು ಹೃದಯದ ವ್ಯಕ್ತಿಯಾಗಿದ್ದ ಎಂದು CityNews ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸೆಪ್ಟೆಂಬರ್ 2022ರಲ್ಲಿ ವ್ಯಾಂಕೋವರ್ ಗೆ ಆಗಮಿಸಿದ್ದ ಚಿರಾಗ್ ಅಂತಿಲ್, ಈಗಷ್ಟೇ ಯೂನಿವರ್ಸಿಟಿ ಕೆನಡಾ ವೆಸ್ಟ್ ನಲ್ಲಿ ತಮ್ಮ ಎಂಬಿಎ ಪದವಿ ಪೂರೈಸಿ, ಇತ್ತೀಚೆಗಷ್ಟೆ ಉದ್ಯೋಗ ಪರವಾನಗಿಯನ್ನು ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News