×
Ad

ಕೆನಡಾದಲ್ಲಿ ಕಪಿಲ್ ಶರ್ಮಾ ಮಾಲಕತ್ವದ ಕೆಫೆ ಮೇಲೆ ಮತ್ತೆ ಗುಂಡಿನ ದಾಳಿ

ದಾಳಿಯ ಹೊಣೆ ಹೊತ್ತ ಗೋಲ್ಡಿ ಧಿಲ್ಲೋನ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌

Update: 2025-08-08 12:30 IST

Photo credit: AP

ಹೊಸದಿಲ್ಲಿ: ಕೆನಡಾದ ಸರ್ರೆಯಲ್ಲಿ ಖ್ಯಾತ ಕಾಮೆಡಿಯನ್ ಕಪಿಲ್ ಶರ್ಮಾ ಅವರ ಕೆಫೆಯ ಮೇಲೆ ಮತ್ತೆ ಗುಂಡಿನ ದಾಳಿ ನಡೆಸಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ನಲ್ಲಿ ಗುರ್ಪ್ರೀತ್ ಸಿಂಗ್ ಅಲಿಯಾಸ್ ಗೋಲ್ಡಿ ಧಿಲ್ಲೋನ್ ಮತ್ತು ಲಾರೆನ್ಸ್ ಬಿಷ್ಣೋಯ್ ಎಂಬ ಎರಡು ಗ್ಯಾಂಗ್‌ಗಳು ದಾಳಿಯ ಹೊಣೆಯನ್ನು ಹೊತ್ತುಕೊಂಡಿವೆ. ನಾವು ಆತನಿಗೆ ಕರೆ ಮಾಡಿದ್ದೆವು, ಆದರೆ ಆತ ಉತ್ತರಿಸಲಿಲ್ಲ ಹಾಗಾಗಿ ನಾವು ಈ ಕ್ರಮ ಕೈಗೊಳ್ಳಬೇಕಾಯಿತು, ಇನ್ನೂ ಮುಂದಿನ ದಿನಗಳಲ್ಲಿ ನಮ್ಮ ಕರೆಗೆ ಉತ್ತರಿಸದಿದ್ದರೆ ಮುಂಬೈಗೆ ಬಂದು ಕ್ರಮ ಕೈಗೊಳ್ಳಲಾಗುವುದು ಎಂದು ಬೆದರಿಕೆಯನ್ನು ಹಾಕಲಾಗಿದೆ.

ಕೆನಡಾದ ಸರ್ರೆಯಲ್ಲಿ ಕಾಮೆಡಿಯನ್ ಕಪಿಲ್ ಶರ್ಮಾ ಅವರ ಕೆಫೆಯ ಮೇಲೆ ಗುಂಡಿನ ದಾಳಿ ನಡೆದಿರುವುದು ಇದು ಎರಡನೇ ಭಾರಿಯಾಗಿದೆ. ಕ್ಯಾಪ್ಸ್ ಕೆಫೆ ಮೇಲೆ ಜುಲೈ 10ರಂದು ಮೊದಲ ಬಾರಿಗೆ ದಾಳಿ ನಡೆದಿತ್ತು. ಈ ವೇಳೆ ಯಾರಿಗೂ ಗಾಯಗಳಾಗಿರಲಿಲ್ಲ. ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News