×
Ad

ಮಾಲಿಯಲ್ಲಿ ಮೂವರು ಭಾರತೀಯರ ಅಪಹರಣ

Update: 2025-07-05 22:47 IST

ಬಮಾಕೊ: ಪಶ್ಚಿಮ ಆಫ್ರಿಕಾದ ಮಾಲಿ ದೇಶದಲ್ಲಿ ಅಲ್ಖೈದಾ ಸಂಯೋಜಿತ ಭಯೋತ್ಪಾದಕ ಗುಂಪು ಮೂವರು ಭಾರತೀಯರನ್ನು ಅಪಹರಣ ಮಾಡಿರುವುದಾಗಿ ವರದಿಯಾಗಿದೆ.

ಅಪಹರಣಕ್ಕೆ ಒಳಗಾದವರಲ್ಲಿ ಒಬ್ಬರನ್ನು ಒಡಿಶಾದ ಗಂಜಾಂ ಜಿಲ್ಲೆಯ ನಿವಾಸಿ ಪಿ. ವೆಂಕಟರಮಣನ್ ಎಂದು ಗುರುತಿಸಲಾಗಿದ್ದು ಇತರ ಇಬ್ಬರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಜುಲೈ 1ರಂದು ಪಶ್ಚಿಮ ಮಾಲಿಯ ಕೆಯಸ್ ನಗರದಲ್ಲಿನ ಡೈಮಂಡ್ ಸಿಮೆಂಟ್ ಫ್ಯಾಕ್ಟರಿಯ ಮೇಲೆ ಸಶಸ್ತ್ರ ಭಯೋತ್ಪಾದಕರ ತಂಡ ದಾಳಿ ನಡೆಸಿದ್ದು ಮೂವರು ಭಾರತೀಯ ಕಾರ್ಮಿಕರು ಸೇರಿದಂತೆ ಹಲವರನ್ನು ಅಪಹರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆಯನ್ನು ಖಂಡಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಅಪಹರಣಕ್ಕೆ ಒಳಗಾದವರ ತ್ವರಿತ ಮತ್ತು ಸುರಕ್ಷಿತ ಬಿಡುಗಡೆಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮಾಲಿ ದೇಶದ ಅಧಿಕಾರಿಗಳನ್ನು ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News