×
Ad

ಲಂಡನ್: ಅಗ್ನಿ ಅವಘಡದಲ್ಲಿ ಭಾರತೀಯ ಮೂಲದ ಒಂದೇ ಕುಟುಂಬ ಐವರು ಮೃತ್ಯು

Update: 2023-11-14 12:17 IST

ಸಾಂದರ್ಭಿಕ ಚಿತ್ರ

ಲಂಡನ್: ಮನೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೂರು ಮಕ್ಕಳು ಸೇರಿದಂತೆ ಐದು ಮಂದಿ ಸದಸ್ಯರ ಕುಟುಂಬವೊಂದು ಮೃತಪಟ್ಟಿರುವ ಘಟನೆ ಪಶ್ಚಿಮ ಲಂಡನ್ ನಲ್ಲಿ ನಡೆದಿದೆ ಎಂದು ಸೋಮವಾರ ಮೆಟ್ರೊಪಾಲಿಟನ್ ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟವರ ಗುರುತನ್ನು ಪೊಲೀಸರು ಈವರೆಗೆ ಬಹಿರಂಗ ಪಡಿಸಿಲ್ಲವಾದರೂ, ವರದಿಗಳ ಪ್ರಕಾರ, ಸಂತ್ರಸ್ತ ಕುಟುಂಬದ ಸದಸ್ಯರು ಭಾರತೀಯ ಮೂಲದವರಾಗಿದ್ದು, ರವಿವಾರ ತಮ್ಮ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸುವುದಕ್ಕೂ ಮುನ್ನ ಅವರೆಲ್ಲ ದೀಪಾವಳಿಯ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು ಎಂದು ಹೇಳಲಾಗಿದೆ.

ಈ ಅಗ್ನಿ ದುರಂತದಲ್ಲಿ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೆಟ್ರೊಪಾಲಿಟನ್ ಮುಖ್ಯ ಪೊಲೀಸ್ ವರಿಷ್ಠಾಧಿಕಾರಿ ಸೀನ್ ವಿಲ್ಸನ್, “ಈ ಘಟನೆಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವವರಿಗೆ ನನ್ನ ಸಂತಾಪಗಳು” ಎಂದು ಸಾಂತ್ವನ ಹೇಳಿದ್ದಾರೆ.

ಸಂತ್ರಸ್ತ ಕುಟುಂಬವು ಇತ್ತೀಚೆಗಷ್ಟೆ ಬೆಲ್ಜಿಯಂನಿಂದ ಲಂಡನ್ ಗೆ ಸ್ಥಳಾಂತರಗೊಂಡಿತ್ತು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News