ಬಾಂಗ್ಲಾ | ಮಹಿಳಾ ಅಧಿಕಾರಿಗೆ ಬೆದರಿಕೆ, ನಿಂದನೆ
Update: 2026-01-05 22:31 IST
ಸಾಂದರ್ಭಿಕ ಚಿತ್ರ
ಢಾಕಾ, ಜ.5: ಬಾಂಗ್ಲಾದೇಶದಲ್ಲಿ ಮಹಿಳಾ ಜಿಲ್ಲಾಧಿಕಾರಿಗೆ ಗುಂಪೊಂದು ಬೆದರಿಕೆ ಹಾಕಿ `ಭಾರತೀಯ ಏಜೆಂಟ್' ಎಂದು ನಿಂದಿಸಿದ ಘಟನೆ ವರದಿಯಾಗಿದೆ.
ಕುರಿಗ್ರಾಮ್ -3 ಕ್ಷೇತ್ರಕ್ಕೆ ಜಮಾತ್ ಅಭ್ಯರ್ಥಿ ಮಹಬೂಬುಲ್ ಆಲಂ ಸಲೇಹಿ ಸಲ್ಲಿಸಿದ್ದ ನಾಮಪತ್ರ ಕಾನೂನು ತೊಡಕುಗಳಿಂದ ತಿರಸ್ಕೃಗೊಂಡ ಬಳಿಕ ಸಲೇಹಿ ಬೆಂಬಲಿಗರು ಜಿಲ್ಲಾಧಿಕಾರಿ ಅನ್ನಪೂರ್ಣ ದೇಬ್‍ನಾಥ್ `ಭಾರತೀಯ ಏಜೆಂಟ್', ಇಸ್ಕಾನ್ ಏಜೆಂಟ್ ಎಂದು ಘೋಷಣೆ ಕೂಗುತ್ತಾ ನಿಂದಿಸಿದರು. ಅವರನ್ನು ಸುತ್ತುವರಿದು ನಿಂದಿಸಲಾಗಿದೆ ಮತ್ತು ತಕ್ಷಣ ವರ್ಗಾಯಿಸುವಂತೆ ಆಗ್ರಹಿಸಲಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.