ಯುದ್ಧದ ಬಳಿಕ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಹಾದಿ ಅನ್ವೇಷಣೆಗೆ ಮೊಜ್ತಬಾ ಖಾಮಿನೈ ಕರೆ
ಮೊಜ್ತಬಾ ಖಾಮಿನೈ (Photo: PTI)
ಟೆಹರಾನ್: ಅಮೆರಿಕದೊಂದಿಗಿನ ಯುದ್ಧ ಮುಗಿದ ಬಳಿಕ ವೈಜ್ಞಾನಿಕ ಪ್ರಗತಿಗೆ ವೇಗ ನೀಡಬೇಕು ಹಾಗೂ ಮೂಲಭೂತ ವಿಜ್ಞಾನಗಳ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದು ಇರಾನ್ ನ ಸರ್ವೋಚ್ಚ ನಾಯಕ ಮೊಜ್ತಬಾ ಖಾಮಿನೈ ಕರೆ ನೀಡಿದ್ದಾರೆ.
ಈ ಕುರಿತು ಇರಾನ್‌ನ ‘ತಸ್ನಿಮ್’ (Tasnim) ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೂಲಭೂತ ವಿಜ್ಞಾನಗಳ ಪರಿಧಿಯನ್ನು ವಿಸ್ತರಿಸುವತ್ತ ಗಮನ ಹರಿಸುವಂತೆ ಖಾಮಿನೈ ಪ್ರತಿಪಾದಿಸಿದ್ದಾರೆ. ಇದುವರೆಗೆ ಅನ್ವೇಷಿಸದ ಹಾದಿಗಳನ್ನು ಕಂಡುಕೊಳ್ಳುವ ಅಗತ್ಯವನ್ನೂ ಅವರು ಒತ್ತಿಹೇಳಿದ್ದಾರೆ ಎಂದು ವರದಿ ತಿಳಿಸಿದೆ.
‘ರಾಷ್ಟ್ರೀಯ ಗಡಿಗಳನ್ನು ಮೀರಿ ಕಾರ್ಯನಿರ್ವಹಿಸಲು ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸುವುದು ಮತ್ತು ತಾಂತ್ರಿಕ ಅಡೆತಡೆಗಳನ್ನು ನಿವಾರಿಸುವುದು ಜಾಗತಿಕ ಮಟ್ಟದಲ್ಲಿ ನಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಅಗತ್ಯವಾದ ಆಂತರಿಕ ಸಾಮರ್ಥ್ಯವನ್ನು ಬಲಪಡಿಸುತ್ತದೆ’ ಎಂದು ಅವರು ಹೇಳಿದ್ದಾರೆ.