ಅಫ್ಘಾನಿಸ್ತಾನವು ಪ್ರತಿಕ್ರಿಯಿಸುವ ಹಕ್ಕನ್ನು ಕಾಯ್ದಿರಿಸಿದೆ: ತಾಲಿಬಾನ್ ಎಚ್ಚರಿಕೆ
Update: 2025-10-18 20:49 IST
ಝಬೀಹುಲ್ಲಾ ಮುಜಾಹಿದ್ | Photo Credit : PTI
ಕಾಬೂಲ್, ಅ.18: ಅಫ್ಘಾನಿಸ್ತಾನವು ಪ್ರತಿಕ್ರಿಯಿಸುವ ಹಕ್ಕನ್ನು ಕಾಯ್ದಿರಿಸಿದೆ. ಆದರೆ ಅದರ ಸಮಾಲೋಚನಾ ತಂಡದ ಘನತೆಯನ್ನು ಕಾಪಾಡಿಕೊಳ್ಳಲು ಹೊಸ ಸೇನಾ ಕಾರ್ಯಾಚರಣೆಗಳನ್ನು ಕೈಗೊಳ್ಳದಂತೆ ಪಡೆಗಳಿಗೆ ಸೂಚಿಸಲಾಗಿದೆ ಎಂದು ಅಘ್ಫಾನಿಸ್ತಾನದ ತಾಲಿಬಾನ್ ಸರ್ಕಾರ ಶನಿವಾರ ಎಚ್ಚರಿಕೆ ನೀಡಿದೆ.
ಪಾಕಿಸ್ತಾನವು ಶಾಂತಿಯುತ ಇತ್ಯರ್ಥಕ್ಕೆ ಬದ್ಧವಾಗಿದೆ, ಆದರೆ ಇತ್ತೀಚಿನ ದಾಳಿಗಳ ಮೂಲಕ ಪಾಕಿಸ್ತಾನ ಪುನರಾವರ್ತಿತ ಅಪರಾಧಗಳನ್ನು ಎಸಗಿದೆ. ಪಕ್ತಿಕಾ ಪ್ರಾಂತದಲ್ಲಿ ನಾಗರಿಕ ಪ್ರದೇಶಗಳ ಮೇಲೆ ಪಾಕಿಸ್ತಾನದ ಮಿಲಿಟರಿ ಪಡೆಗಳ ದಾಳಿ ಅಫ್ಘಾನಿಸ್ತಾನದ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ. ಇಂತಹ ಕೃತ್ಯಗಳನ್ನು ಪ್ರಚೋದನಕಾರಿ ಮತ್ತು ಸಂಘರ್ಷವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಪ್ರಯತ್ನಗಳೆಂದು ಪರಿಗಣಿಸಲಾಗುತ್ತದೆ ಎಂದು ತಾಲಿಬಾನ್ ವಕ್ತಾರ ಝಬೀಹುಲ್ಲಾ ಮುಜಾಹಿದ್ ಹೇಳಿದ್ದಾರೆ.