ಲಾಹೋರ್ ಮೇಲೆ ಭಾರತದ ದಾಳಿ: ಪಾಕಿಸ್ತಾನ ತೊರೆಯುವಂತೆ ತನ್ನ ನಾಗರಿಕರಿಗೆ ಅಮೇರಿಕಾ ಸೂಚನೆ
Update: 2025-05-08 18:30 IST
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಲಾಹೋರ್ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ಬಳಿಕ, ಪಾಕಿಸ್ತಾನವನ್ನು ತೊರೆಯುವಂತೆ ಅಮೇರಿಕಾವು ತನ್ನ ನಾಗರಿಕರಿಗೆ ಸೂಚಿಸಿದೆ.
ಲಾಹೋರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡ್ರೋನ್ ಸ್ಫೋಟಗಳು ನಡೆದಿದ್ದು, ಲಾಹೋರ್ ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯು ತನ್ನ ಎಲ್ಲಾ ಸಿಬ್ಬಂದಿಗೆ ತಕ್ಷಣವೇ ಆಶ್ರಯ ನೀಡುವಂತೆ ಸೂಚಿಸಿದೆ.
ಸಂಘರ್ಷದ ಪ್ರದೇಶದಲ್ಲಿರುವ ಅಮೆರಿಕದ ನಾಗರಿಕರು ಸುರಕ್ಷಿತವಾಗಿ ಹೊರಡಲು ಸಾಧ್ಯವಾದರೆ ಹೊರಡಬೇಕು. ಹೊರಡುವುದು ಸುರಕ್ಷಿತವಲ್ಲದಿದ್ದರೆ, ಅವರು ಸ್ಥಳದಲ್ಲಿ ಆಶ್ರಯ ಪಡೆಯಬೇಕು ಎಂದು ಪಾಕಿಸ್ತಾನದಲ್ಲಿರುವ ಅಮೆರಿಕದ ದೂತಾವಾಸ ಕಚೇರಿ ತನ್ನ ನಾಗರಿಕರಿಗೆ ಸೂಚಿಸಿದೆ.