×
Ad

ಮಲಾವಿ ದೇಶದ ಉಪಾಧ್ಯಕ್ಷರಿದ್ದ ವಿಮಾನ ಕಣ್ಮರೆ : ವರದಿ

Update: 2024-06-10 22:10 IST

ಸೌಲೋಸ್ ಕ್ಲಾಸ್ ಚಿಲಿಮಾ | PC : reuters. 

ಲಿಲಾಂಗ್ವೆ : ಮಲಾವಿ ದೇಶದ ಉಪಾಧ್ಯಕ್ಷ ಸೌಲೋಸ್ ಕ್ಲಾಸ್ ಚಿಲಿಮಾ ಮತ್ತು ಇತರ ಒಂಬತ್ತು ಮಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಕಣ್ಮರೆಯಾಗಿದೆ ಎಂದು ಮಲಾವಿಯ ಅಧ್ಯಕ್ಷರ ಸಚಿವಾಲಯ ಸೋಮವಾರ ತಿಳಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

"ರಾಡಾರ್ ಸಂಪರ್ಕ ಕಳೆದುಕೊಂಡ ನಂತರ ವಿಮಾನದೊಂದಿಗೆ ಸಂಪರ್ಕ ಸಾಧಿಸಲು ವಾಯುಯಾನ ಅಧಿಕಾರಿಗಳು ನಡೆಸಿದ ಎಲ್ಲಾ ಪ್ರಯತ್ನಗಳು ಇಲ್ಲಿಯವರೆಗೆ ವಿಫಲವಾಗಿವೆ" ಎಂದು ಮಲಾವಿಯ ಅಧ್ಯಕ್ಷರ ಹೇಳಿಕೆ ತಿಳಿಸಿದೆ.

ಮಲಾವಿ ಉಪಾಧ್ಯಕ್ಷ ಚಿಲಿಮಾ ಅವರು ಸ್ಥಳೀಯ ಕಾಲಮಾನ 09 : 17ಕ್ಕೆ ರಾಜಧಾನಿ ಲಿಲಾಂಗ್ವೆಯಿಂದ ಮಲಾವಿ ರಕ್ಷಣಾ ಪಡೆಯ ವಿಮಾನದಲ್ಲಿ ಹೊರಟಿದ್ದರು ಎನ್ನಲಾಗಿದೆ. ವಿಮಾನ ಕಣ್ಮರೆಯಾತ್ತಿದ್ದಂತೆ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ ಎಂದು ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News