×
Ad

ಅಮೆರಿಕದ ಹೊಸ ರಾಷ್ಟ್ರೀಯ ರಕ್ಷಣಾ ಕಾರ್ಯತಂತ್ರದಲ್ಲಿ ಇಂಡೊ–ಪೆಸಿಫಿಕ್‌ ಗೆ ಆದ್ಯತೆ

Update: 2026-01-25 23:16 IST

Photo : Meta AI

ವಾಷಿಂಗ್ಟನ್, ಜ.25: ಟ್ರಂಪ್ ಆಡಳಿತವು ಶನಿವಾರ ಬಿಡುಗಡೆಗೊಳಿಸಿರುವ ಹೊಸ ರಾಷ್ಟ್ರೀಯ ರಕ್ಷಣಾ ಕಾರ್ಯತಂತ್ರ (ಎನ್‌ಡಿಎಸ್)ದಲ್ಲಿ ಇಂಡೊ–ಪೆಸಿಫಿಕ್ ಮತ್ತು ಅಮೆರಿಕಾದ ತಾಯ್ನಾಡು ರಕ್ಷಣೆಗೆ ಯುರೋಪ್ ಮತ್ತು ಮಧ್ಯಪ್ರಾಚ್ಯಕ್ಕಿಂತ ಹೆಚ್ಚಿನ ಆದ್ಯತೆ ನೀಡಲಾಗಿದೆ.

ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್ ಸಹಿ ಹಾಕಿರುವ ಈ ದಾಖಲೆ, ಮುಂಬರುವ ವರ್ಷಗಳಲ್ಲಿ ಅಮೆರಿಕಾದ ರಕ್ಷಣಾ ಇಲಾಖೆಯ ಕಾರ್ಯತಂತ್ರದ ಆದ್ಯತೆಗಳನ್ನು ನಿರ್ಧರಿಸಿದ್ದು, ಚೀನಾವನ್ನು ಮುಖಾಮುಖಿಯ ಮೂಲಕವಲ್ಲ, ಬಲದ ಮೂಲಕ ಎದುರಿಸಲು ಕರೆ ನೀಡಿದೆ. ಎನ್‌ಡಿಎಸ್‌ನಲ್ಲಿ ಚೀನಾವನ್ನು ಅಮೆರಿಕಾದ ರಕ್ಷಣಾ ಯೋಜನೆಯ ಕೇಂದ್ರದಲ್ಲಿ ಇರಿಸಲಾಗಿದ್ದು, ‘ಚೀನಾ 19ನೇ ಶತಮಾನದಿಂದಲೂ ಅಮೆರಿಕಾವನ್ನು ಹೊರತುಪಡಿಸಿದರೆ ಅತ್ಯಂತ ಬಲಿಷ್ಠ ರಾಷ್ಟ್ರ’ ಎಂದು ಗುರುತಿಸಲಾಗಿದೆ.

ರಶ್ಯವನ್ನು ನಂತರದ ಸ್ಥಾನದಲ್ಲಿ ಇರಿಸಿದ್ದರೂ, ಅದನ್ನು ಗಂಭೀರ ಸವಾಲು ಎಂದು ಪರಿಗಣಿಸಲಾಗಿದೆ. ‘ನ್ಯಾಟೋನ ಪೂರ್ವದ ಸದಸ್ಯ ರಾಷ್ಟ್ರಗಳಿಗೆ ರಶ್ಯವು ನಿರಂತರ, ಆದರೆ ನಿರ್ವಹಿಸಬಹುದಾದ ಬೆದರಿಕೆಯಾಗಿ ಉಳಿಯುತ್ತದೆ’ ಎಂದು ದಾಖಲೆಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News