×
Ad

ಅಮೆರಿಕಾದ ಹೊಸ ರಕ್ಷಣಾ ನೀತಿ ಪ್ರಕಟ: ಭಾರತದ ಪ್ರಾಮುಖ್ಯತೆ ಕುಸಿತ

Update: 2025-12-07 23:20 IST

Photo : Meta AI

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2025ರ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ(ಎನ್ಎಸ್ಎಸ್)ವನ್ನು ಬಿಡುಗಡೆಗೊಳಿಸಿದ್ದು ಆಡಳಿತದ ವಿದೇಶಾಂಗ ನೀತಿಯ ನಿಷ್ಠುರ ನೀಲನಕ್ಷೆಯನ್ನು ಒದಗಿಸಿದೆ.

ಭಾರತದೊಂದಿಗಿನ ಪಾಲುದಾರಿಕೆಯ ಬಗ್ಗೆ ಅಮೆರಿಕಾದ ಅಭಿವ್ಯಕ್ತಿಯಲ್ಲಿ ಸ್ಪಷ್ಟ ಬದಲಾವಣೆಯನ್ನು ಈ ಕಾರ್ಯತಂತ್ರ ತೋರಿಸಿದೆ. 2017ರ ಎನ್ಎಸ್ಎಸ್ ನಲ್ಲಿ `ಇಂಡೊ-ಪೆಸಿಫಿಕ್ ಕಾರ್ಯತಂತ್ರದಲ್ಲಿ ಭಾರತಕ್ಕೆ ಹೆಮ್ಮೆಯ ಸ್ಥಾನ ನೀಡಲಾಗಿತ್ತು. `ಭಾರತವು ಪ್ರಮುಖ ಜಾಗತಿಕ ಶಕ್ತಿಯಾಗಿ ಮತ್ತು ಬಲವಾದ ಕಾರ್ಯತಂತ್ರ ಮತ್ತು ರಕ್ಷಣಾ ಪಾಲುದಾರನಾಗಿ ಹೊರಹೊಮ್ಮುವುದನ್ನು' ಸ್ಪಷ್ಟವಾಗಿ ಸ್ವಾಗತಿಸಲಾಗಿತ್ತು.

ಇತ್ತೀಚಿನ ದಾಖಲೆಯಲ್ಲಿ ಈ ಭಾಷೆಯನ್ನು ಗಮನಾರ್ಹವಾಗಿ ಹದಗೊಳಿಸಿದೆ. `ಕ್ವಾಡ್ ಸೇರಿದಂತೆ ಇಂಡೊ-ಪೆಸಿಫಿಕ್ ಭದ್ರತೆಗೆ ಕೊಡುಗೆ ನೀಡಲು ಭಾರತವನ್ನು ಉತ್ತೇಜಿಸಲು ಅಮೆರಿಕಾವು ಭಾರತದೊಂದಿಗೆ ವಾಣಿಜ್ಯ ಹಾಗೂ ಇತರ ಸಂಬಂಧಗಳನ್ನು ಸುಧಾರಿಸುವುದನ್ನು ಮುಂದುವರಿಸಬೇಕು' ಎಂದಷ್ಟೇ ಉಲ್ಲೇಖಿಸಲಾಗಿದೆ. ಇಂಡೊ-ಪೆಸಿಫಿಕ್ ಸಹಕಾರದ ಮೂಲಾಧಾರವಾದ ಕ್ವಾಡ್ನ ಉಲ್ಲೇಖವು ಗಮನಾರ್ಹವಾಗಿ ಸಂಕ್ಷಿಪ್ತವಾಗಿದ್ದು ಹಿಂದಿನ ವ್ಯಾಪಕ ಘೋಷಣೆಗಳಿಗೆ ಹೋಲಿಸಿದರೆ ಕಡಿಮೆ ಕಾರ್ಯತಂತ್ರದ ಮಹತ್ವವನ್ನು ಸೂಚಿಸುತ್ತದೆ' ಎಂದು ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News