ಇಸ್ರೇಲ್ ಸೇನೆಯ ಆಕ್ರಮಣ ಕೊನೆಗೊಂಡರೆ ಫೆಲೆಸ್ತೀನಿಯನ್ ಪ್ರಾಧಿಕಾರಕ್ಕೆ ಶಸ್ತ್ರಾಸ್ತ್ರ ಹಸ್ತಾಂತರ: ಹಮಾಸ್
Photo Credit : aljazeera.com
ಗಾಝಾ ನಗರ: ಇಸ್ರೇಲ್ ಸೇನೆಯ ಆಕ್ರಮಣ ಕೊನೆಗೊಂಡರೆ ಗಾಝಾ ಪಟ್ಟಿಯಲ್ಲಿ ತನ್ನ ಶಸ್ತ್ರಾಸ್ತ್ರಗಳನ್ನು ಫೆಲೆಸ್ತೀನಿಯನ್ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ತಾನು ಸಿದ್ಧ ಎಂದು ಹಮಾಸ್ ಹೇಳಿದೆ.
ನಮ್ಮ ಶಸ್ತ್ರಾಸ್ತ್ರಗಳು ಆಕ್ರಮಣ ಮತ್ತು ಆಕ್ರಮಣಕಾರರ ಉಪಸ್ಥಿತಿಯೊಂದಿಗೆ ಸಂಬಂಧಿಸಿದೆ. ಆಕ್ರಮಣ ಕೊನೆಗೊಂಡರೆ ಈ ಆಯುಧಗಳನ್ನು ಸ್ವತಂತ್ರ ಮತ್ತು ಸಾರ್ವಭೌಮ ಫೆಲೆಸ್ತೀನಿಯನ್ ರಾಷ್ಟ್ರಕ್ಕೆ ಹಸ್ತಾಂತರಿಸಲಾಗುವುದು ಎಂದು ಹಮಾಸ್ ನ ಗಾಝಾ ಮುಖ್ಯಸ್ಥ ಖಲೀಲ್ ಅಲ್-ಹಯ್ಯಾ ಹೇಳಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಗಡಿಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಗಾಝಾದಲ್ಲಿ ಕದನ ವಿರಾಮದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ವಿಶ್ವಸಂಸ್ಥೆ ಪಡೆಗಳನ್ನು ಪ್ರತ್ಯೇಕ ಪಡೆಯಾಗಿ ನಿಯೋಜಿಸುವುದನ್ನು ನಾವು ಸ್ವೀಕರಿಸುತ್ತೇವೆ' ಎಂದು ಅಲ್-ಹಯ್ಯಾ ಹೇಳಿದ್ದಾರೆ. ಅಂತಾರಾಷ್ಟ್ರೀಯ ಪಡೆಗಳ ಕಾರ್ಯ ಹಮಾಸ್ ಅನ್ನು ನಿಶ್ಯಸ್ತ್ರಗೊಳಿಸುವುದು ಎಂಬ ಅಂಶವನ್ನು ಹಮಾಸ್ ತಿರಸ್ಕರಿಸಿದೆ.