×
Ad

Pakistan | ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ, ದುರಹಂಕಾರಿ: ಪಾಕ್ ಸೇನೆ ವಾಗ್ದಾಳಿ

Update: 2025-12-06 22:13 IST

ಇಮ್ರಾನ್ ಖಾನ್ | Photo Credit : PTI 

ಇಸ್ಲಾಮಾಬಾದ್, ಡಿ.6: ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ವಿರುದ್ಧ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೀಡಿರುವ ಹೇಳಿಕೆಗಳಿಗೆ ಮಿಲಿಟರಿ ಎದಿರೇಟು ನೀಡಿದ್ದು `ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಮತ್ತು ದುರಹಂಕಾರಿ' ಎಂದು ಟೀಕಿಸಿದೆ.

ಆಸಿಮ್ ಮುನೀರ್ `ಮಾನಸಿಕವಾಗಿ ಅಸ್ಥಿರವಾಗಿದ್ದಾರೆ' ಎಂದು ಇಮ್ರಾನ್ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸೇನೆ `ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ. ಸಶಸ್ತ್ರ ಪಡೆಗಳ ಮೇಲೆ ದಾಳಿ ನಡೆಸಿ ಅಶಾಂತಿಯನ್ನು ಉಂಟು ಮಾಡಲು ಕುಟುಂಬ ಭೇಟಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳನ್ನು ಬಳಸಿಕೊಳ್ಳುತ್ತಿದ್ದಾರೆ' ಎಂದು ಆರೋಪಿಸಿದೆ.

ಇಮ್ರಾನ್ ಖಾನ್ ಓರ್ವ ದುರಹಂಕಾರಿ. `ನಾನು ಅಧಿಕಾರದಲ್ಲಿ ಇರದಿದ್ದರೆ ಎಲ್ಲವೂ ನಾಶವಾಗಬೇಕು' ಎಂಬ ರಾಜಕೀಯ ಮಹತ್ವಾಕಾಂಕ್ಷೆ ಇರುವ ವ್ಯಕ್ತಿ. ಜೈಲಿನಲ್ಲಿ ಇಮ್ರಾನ್ ಖಾನ್‍ ರನ್ನು ಭೇಟಿಯಾಗಲು ಬರುವ ವ್ಯಕ್ತಿಗಳನ್ನು ಸೇನೆಯ ವಿರುದ್ಧ ವಿಷ ಹರಡಲು ಬಳಸಲಾಗುತ್ತಿದೆ' ಎಂದು ಸೇನೆಯ ವಕ್ತಾರ ಲೆ|ಜ| ಅಹ್ಮದ್ ಷರೀಫ್ ಚೌಧರಿ ಆರೋಪಿಸಿದ್ದಾರೆ.

ಸೇನೆಯ ಬಗ್ಗೆ ಹಗೆತನವನ್ನು ಪ್ರಚೋದಿಸಲು ಖಾನ್ ಪ್ರಯತ್ನಿಸುತ್ತಿದ್ದಾರೆ. ಪಾಕಿಸ್ತಾನದ ಮಿಲಿಟರಿ ಮತ್ತು ಜನರ ನಡುವೆ ಕಂದಕವನ್ನು ಸೃಷ್ಟಿಸಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ. ಸಾಂವಿಧಾನಿಕ ಹಕ್ಕುಗಳು ಮಿತಿಗಳನ್ನು ಒಳಗೊಂಡಿರುತ್ತವೆ. ಈ ವ್ಯಕ್ತಿಯೇ 2023ರ ಮೇ 9ರಂದು ರಾವಲ್ಪಿಂಡಿಯ ಮಿಲಿಟರಿ ಪ್ರಧಾನ ಕಚೇರಿ ಸೇರಿದಂತೆ ಸೇನಾ ನೆಲೆಗಳ ಮೇಲಿನ ದಾಳಿಯನ್ನು ಯೋಜಿಸಿದ್ದವರು' ಎಂದು ಅವರು ಪ್ರತಿಪಾದಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News