×
Ad

ಭಾರತದಲ್ಲಿ ಖಾಲಿಸ್ತಾನ್ ಪರ ಚಟುವಟಿಕೆಯಲ್ಲಿ ಸಂಪರ್ಕ; ಸಿಖ್ ಉದ್ಯಮಿಗೆ ಬ್ರಿಟನ್ ನಿರ್ಬಂಧ

Update: 2025-12-06 22:16 IST

ಗುರುಪ್ರೀತ್ ಸಿಂಗ್ ರೆಹಾಲ್ |Photo Credit : hindustantimes.com

ಲಂಡನ್, ಡಿ.6: ಭಾರತದಲ್ಲಿ ಖಾಲಿಸ್ತಾನ್ ಪರ ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವ ಜೊತೆಗೆ ಇಂತಹ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದ ಆರೋಪದಡಿ ಬ್ರಿಟಿಷ್ ಸಿಖ್ ಉದ್ಯಮಿ ಗುರುಪ್ರೀತ್ ಸಿಂಗ್ ರೆಹಾಲ್ ಮತ್ತು ಅವರಿಗೆ ಸಂಬಂಧಿಸಿದ `ಬಬ್ಬರ್ ಅಕಾಲಿ ಲೆಹರ್' ಗುಂಪಿನ ಮೇಲೆ ಬ್ರಿಟನ್ ಕಠಿಣ ನಿರ್ಬಂಧಗಳನ್ನು ವಿಧಿಸಿದೆ.

`ದೇಶೀಯ ಭಯೋತ್ಪಾದನಾ ನಿಗ್ರಹ' ಕಾನೂನನ್ನು ಮೊದಲ ಬಾರಿ ಬಳಸಿ ಗುರುಪ್ರೀತ್ ಸಿಂಗ್ ರೆಹಾಲ್ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು ತಕ್ಷಣ ಅವರ ಆಸ್ತಿಯನ್ನು ಸ್ಥಂಭನಗೊಳಿಸಲಾಗುತ್ತದೆ. ಉನ್ನತ ಗುಪ್ತಚರ ಮೂಲಗಳ ಪ್ರಕಾರ, ಈ ಕ್ರಮವು ಬ್ರಿಟನ್ ಮೂಲದ ಭಯೋತ್ಪಾದಕ ಹಣಕಾಸು ಜಾಲಗಳನ್ನು ಕೆಡವಲು ಮತ್ತು `ಭಾರತ ವಿರೋಧಿ' ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಆರ್ಥಿಕ ನೆರವನ್ನು ಕಿತ್ತುಹಾಕುವ ಭಾರತದ ಪ್ರಯತ್ನಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News