×
Ad

ಐವರು ಸಹ ಯೋಧರನ್ನು ಹತ್ಯೆಗೈದ ಇರಾನ್ ಯೋಧ

Update: 2024-01-22 23:11 IST

ಸಾಂದರ್ಭಿಕ ಚಿತ್ರ

ಟೆಹ್ರಾನ್ : ಇರಾನ್‍ನ ಆಗ್ನೇಯದ ಕೆರ್ಮಾನ್ ನಗರದಲ್ಲಿ ಯೋಧನೊಬ್ಬ  ಐವರು ಸಹಯೋಧರನ್ನು ಗುಂಡಿಕ್ಕಿ ಹತ್ಯೆಗೈದಿರುವುದಾಗಿ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ.

ಸೇನಾ ತುಕಡಿ ವಿಶ್ರಾಂತಿ ತೆಗೆದುಕೊಳ್ಳುವ ಕೊಠಡಿಗೆ ಆಗಮಿಸಿದ ಆರೋಪಿ, ಅಲ್ಲಿ ಮಲಗಿದ್ದ ಐವರು ಸಹ ಯೋಧರನ್ನು ಗುಂಡಿಕ್ಕಿ ಹತ್ಯೆಗೈದು ಅಲ್ಲಿಂದ ಪರಾರಿಯಾಗಿದ್ದಾನೆ. ಹತ್ಯೆ ನಡೆಸಲು ಕಾರಣ ಸ್ಪಷ್ಟವಾಗಿಲ್ಲ. ಆರೋಪಿಯ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ. ಕೆಲಸದ ಒತ್ತಡದ ಹತಾಶೆಯಿಂದ ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ. ಇರಾನ್‍ನಲ್ಲಿ 19 ವರ್ಷ ಮೀರಿದ ಪುರುಷರಿಗೆ 2 ವರ್ಷ ಮಿಲಿಟರಿ ಸೇವೆ ಕಡ್ಡಾಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News