×
Ad

ಇಸ್ರೇಲ್‍ಗೆ ಸಂಬಂಧಿಸಿದ ಮತ್ತೊಂದು ಹಡಗು ಹೈಜಾಕ್

Update: 2023-11-26 22:27 IST

ಎಂವಿ ಸೆಂಟ್ರಲ್ ಪಾರ್ಕ್ ಟ್ಯಾಂಕರ್ Source: Screenshot.

ವಾಷಿಂಗ್ಟನ್: ಇಸ್ರೇಲ್ ಸಂಸ್ಥೆಗೆ ಸಂಬಂಧಿಸಿದ ಮತ್ತೊಂದು ಟ್ಯಾಂಕರ್ ಹಡಗನ್ನು ರವಿವಾರ ಯೆಮನ್ ಕರಾವಳಿಯಲ್ಲಿ ಹೈಜಾಕ್ ಮಾಡಲಾಗಿದೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.

ಏಡನ್ ಕೊಲ್ಲಿಯ ಜಲಮಾರ್ಗದ ಮೂಲಕ ಸಾಗುತ್ತಿದ್ದ ಎಂವಿ ಸೆಂಟ್ರಲ್ ಪಾರ್ಕ್ ಟ್ಯಾಂಕರ್ ಅನ್ನು ಗುರುತಿಸಲಾಗದ ಸಶಸ್ತ್ರ ಗುಂಪು ವಶಕ್ಕೆ ಪಡೆದಿದೆ. ಬ್ರಿಟನ್ ಮೂಲದ, ಇಸ್ರೇಲ್ ಜತೆ ಸಂಪರ್ಕವಿರುವ ಸಂಸ್ಥೆಯ ಮಾಲಕತ್ವದ ಟ್ಯಾಂಕರ್ ಇದಾಗಿದ್ದು ಈಗ ಅಮೆರಿಕ ಹಾಗೂ ಅದರ ಮಿತ್ರದೇಶಗಳ ಯುದ್ಧನೌಕೆಗಳು ಏಡನ್ ಕೊಲ್ಲಿಯನ್ನು ತಲುಪಿವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News