ಗಾಯಕ ಝುಬೀನ್ ಗರ್ಗ್ ಸಾವಿನ ಕುರಿತು ಅಸ್ಸಾಂ ಸರಕಾರದಿಂದ ತನಿಖೆ: ಹಿಮಂತ ಬಿಸ್ವ ಶರ್ಮ
Update: 2025-09-20 17:35 IST
ಝುಬೀನ್ ಗರ್ಗ್(X), ಹಿಮಂತ ಬಿಸ್ವ ಶರ್ಮ( PTI )
ಗುವಾಹಟಿ: ಗಾಯಕ ಝುಬೀನ್ ಗರ್ಗ್ ಸಾವಿನ ಕುರಿತು ಅಸ್ಸಾಂ ಸರಕಾರ ತನಿಖೆ ನಡೆಸಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಪ್ರಕಟಿಸಿದ್ದಾರೆ.
ಈ ಸಂಬಂಧ ಮೋರಿಗಾಂವ್ ಪೊಲೀಸ್ ಠಾಣೆಯಲ್ಲಿ ಈಶಾನ್ಯ ಭಾರತ ಸಮ್ಮೇಳನ ಸಂಘಟಕ ಶ್ಯಾಮ್ ಕಾನು ಮಹಂತ ಹಾಗೂ ಗಾಯಕರ ವ್ಯವಸ್ಥಾಪಕ ಸಿದ್ಧಾರ್ಥ ಶರ್ಮ ವಿರುದ್ಧ ಎಫ್ಐಆರ್ ದಾಖಲಾಗಿದೆ.
“ಝುಬೀನ್ ಗರ್ಗ್ ಅವರ ಸಾವನ್ನು ಅಸ್ಸಾಂ ಪೊಲೀಸರು ತನಿಖೆ ನಡೆಸಲಿದ್ದು, ಮಹಂತ ಹಾಗೂ ಶರ್ಮ ಅಲ್ಲದೆ, ಝುಬೀನ್ ಗರ್ಗ್ ಅವರ ಅಂತಿಮ ಕ್ಷಣಗಳಲ್ಲಿ ಅವರೊಂದಿಗಿದ್ದವರನ್ನೂ ವಿಚಾರಣೆಗೊಳಪಡಿಸಲಾಗುವುದು” ಎಂದು ಸುದ್ದಿಗಾರರಿಗೆ ಹಿಮಂತ ಬಿಸ್ವ ಶರ್ಮ ತಿಳಿಸಿದ್ದಾರೆ.
ಶುಕ್ರವಾರ ಸಿಂಗಪೂರ್ ನಲ್ಲಿ ಸ್ಕೂಬಾ ಡೈವಿಂಗ್ ವೇಳೆ ಝುಬೀನ್ ಗರ್ಗ್ ಮೃತಪಟ್ಟಿದ್ದಾರೆ.